ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಹೆಚ್ಚಿನ ಕಾರ್ಯದೊತ್ತಡ ಅನುಭವಕ್ಕೆ ಬರುವುದು. ಆದರೆ ಅಭಿವೃದ್ಧಿಗೆ ಕೊರತೆಯಿರದು. ದಾಂಪತ್ಯದಲ್ಲಿ ಹೊಂದಾಣಿಕೆ ಕೊರತೆ ಎದುರಾಗಬಹುದು. ಆರೋಗ್ಯ ಹದಗೆಡಬಹುದು. ಎಚ್ಚರಿಕೆ ಅಗತ್ಯ.ವೃಷಭ: ಅನಿರೀಕ್ಷಿತವಾಗಿ ಖರ್ಚು ವೆಚ್ಚಗಳು ಕಂಡುಬರುವುದು. ಹಿರಿಯರ ತೀರ್ಥ ಯಾತ್ರೆಗೆ ಏರ್ಪಾಡು ಮಾಡುವಿರಿ. ಮನೆಯಲ್ಲಿ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ.ಮಿಥುನ: ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳುಂಟಾಗಬಹುದು. ಆರ್ಥಿಕವಾಗಿ ಹಿನ್ನಡೆ ಎದುರಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ವಿಳಂಬ ಧೋರಣೆ ಅನುಸರಿಸಿದರೆ