ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಬುಧವಾರ, 1 ಮೇ 2019 (07:33 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಇದ್ದರೂ ಅಂತಿಮವಾಗಿ ನಿಮ್ಮ ಕಾರ್ಯಸಾಧನೆಯಾಗಬಹುದು. ಸಂಗಾತಿಯೊಂದಿಗೆ ಮನಸ್ತಾಪವಾಗಬಹುದು. ಆರ್ಥಿಕವಾಗಿ ಧನಾಗಮನವಾಗಲಿದೆ.
 
ವೃಷಭ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ವಿದೇ ಪ್ರಯಾಣ ಯೋಗವಿದೆ. ಆರ್ಥಿಕವಾಗಿ ಧನಾಗಮನವಾದಷ್ಟೇ ಖರ್ಚೂ ಹೆಚ್ಚಲಿದೆ.
 
ಮಿಥುನ: ಕೆಲಸ ಕಾರ್ಯಗಳಲ್ಲಿ ವಿಳಂಬವಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದಾದರೂ ಮನಸ್ಸಿಗೆ ಹಿಡಿಸದು. ವ್ಯಾಪಾರಿಗಳು ಕೊಂಚ ನಷ್ಟ ಅನುಭವಿಸಬೇಕಾದೀತು. ಕೃಷಿ ಕ್ಷೇತ್ರದಲ್ಲಿ ಇರುವವರು ಲಾಭ ಗಳಿಸುವರು.
 
ಕರ್ಕಟಕ: ಹೆಚ್ಚಿನ ಕಾರ್ಯಲಾಭವಾಗಬೇಕಾದರೆ ಕುಲದೇವರ ಪ್ರಾರ್ಥನೆ ಮಾಡಿ ಮುನ್ನಡೆಯಿರಿ. ಹೆಚ್ಚಿನ ಹಣ ಸಂಪಾದನೆಗೆ ನಾನಾ ಮಾರ್ಗಗಳನ್ನು ಕಾಣುವಿರಿ. ಮನೆಯಲ್ಲಿ ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವಿರಿ.
 
ಸಿಂಹ: ಆರೋಗ್ಯ ಭಾಗ್ಯ ಸುಧಾರಿಸುವುದು. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಸಾಲಗಾರರ ಕಾಟದಿಂದ ಹೈರಾಣಾಗುವಿರಿ. ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರಿಗೆ ಬಡ್ತಿ, ಮುನ್ನಡೆ ಭಾಗ್ಯವಿದೆ.
 
 
ಕನ್ಯಾ: ಮಹಿಳೆಯರಿಗೆ ಮಾನಸಿಕ ಏರುಪೇರುಗಳಾಗಬಹುದು. ಹಿಂದೆ ಮಾಡಿದ ತಪ್ಪಿನ ಅರಿವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಹುಡುಕಿಕೊಂಡು ಬರಲಿದೆ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ.
 
ತುಲಾ: ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಧನಾಗಮನವಾದಷ್ಟೇ ಖರ್ಚೂ ಹೆಚ್ಚುವುದು. ಎಚ್ಚರಿಕೆ ಅಗತ್ಯ.
 
ವೃಶ್ಚಿಕ: ಸಾಂಸಾರಿಕವಾಗಿ ಇದ್ದ ಕಷ್ಟ, ವ್ಯಥೆಗಳು ದೂರವಾಗಿ ನೆಮ್ಮದಿ ಮೂಡಲಿದೆ. ಅವಿವಾಹಿತರಿಗೆ ವಿವಾಹಕ್ಕೆ ಅಡ್ಡಿ ಆತಂಕಗಳು ಎದುರಾಗಬಹುದು. ವಿದ್ಯಾರ್ಥಿಗಳಿಗೆ ಪ್ರಯತ್ನಬಲದಿಂದ ಯಶಸ್ಸು. ದಿನದಂತ್ಯಕ್ಕೆ ಶುಭಸುದ್ದಿ.
 
ಧನು: ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ. ಮನೆಗೆ ಅನಿರೀಕ್ಷಿತವಾಗಿ ನೆಂಟರಿಷ್ಟರ ಆಗಮನವಾಗಲಿದೆ. ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ಹೆಚ್ಚುವುದು. ದೂರ ಸಂಚಾರ ಮಾಡಬೇಕಾಗಿ ಬರಬಹುದು. ದೇವತಾ ಪ್ರಾರ್ಥನೆ ಮಾಡಿ.
 
ಮಕರ: ಮಾನಸಿಕ ಉದ್ವೇಗಕ್ಕೊಳಗಾಗಿ ನಿರ್ಧಾರ ಕೈಗೊಳ್ಳಬೇಡಿ. ಕೋರ್ಟು ಕಚೇರಿ ವ್ಯಾಜ್ಯಗಳಲ್ಲಿ ಜಯ ಸಿಗುವುದು. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆರ್ಥಿಕವಾಗಿ ಸಾಕಷ್ಟು ಧನಾಗಮನವಾಗಲಿದೆ.
 
ಕುಂಭ: ಅನವಶ್ಯಕವಾಗಿ ವಾದ ವಿವಾದಗಳಲ್ಲಿ ತೊಡಗಿಸಿಕೊಂಡು ಅಪವಾದಕ್ಕೆ ಗುರಿಯಾಗುವಿರಿ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನಾಮನವಾಗಲಿದೆ. ಮನೆ ಬದಲವಾಣೆ ಬಗ್ಗೆ ಚಿಂತನೆ ಮಾಡುವಿರಿ. ದಿನದಂತ್ಯಕ್ಕೆ ಶುಭ ಸುದ್ದಿ.
 
ಮೀನ: ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿದರೂ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಅಗತ್ಯ. ಬಂಧು ಮಿತ್ರರೊಂದಿಗೆ ಮನಸ್ತಾಪವಾದೀತು. ತಾಳ್ಮೆಯಿಂದ ಮುನ್ನಡೆಯುವುದು ಅಗತ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?

ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ...

news

ಶನಿ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?

ಬೆಂಗಳೂರು: ಹೆಚ್ಚಿನವರು ಶನಿ ದೋಷದಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿದ್ದರೆ ಈ ಗ್ರಹದ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?

ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ...