ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಮಂಗಳವಾರ, 7 ಮೇ 2019 (07:04 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಮನೆಯಲ್ಲಿ ಬಂಧುಮಿತ್ರರ ಆಗಮನ ಮನಸ್ಸಿಗೆ ಮುದ ನೀಡಲಿದೆ. ಹಾಗಿದ್ದರೂ ಹಿರಿಯರ ಅಸಮಾಧಾನಕ್ಕೆ ಕಾರಣವಾಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.
 
ವೃಷಭ: ಮನೆಯಲ್ಲಿ ಶುಭ ಮಂಗಲಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಕೊಂಚ ಹಿನ್ನಡೆಯಾದೀತು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಬಂಧುಮಿತ್ರರಲ್ಲಿ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರವಹಿಸಿ.
 
ಮಿಥುನ: ಶೀತ ಸಂಬಂಧೀ ಸಮಸ್ಯೆಗಳು ಬರಬಹುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮುನ್ನಡೆಯಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಆರ್ಥಿಕವಾಗಿ ಸಮಾಧಾನಕರ ದಿನ.
 
ಕರ್ಕಟಕ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಭಾರೀ ಮುನ್ನಡೆ. ನಿರುದ್ಯೋಗಿಗಳಿಗೆ ಉದ್ಯೋಗಾರ್ಥವಾಗಿ ದೂರ ಸಂಚಾರ ಮಾಡಬೇಕಾಗಿಬರಬಹುದು. ನೂತನ ವಿವಾಹಿತರಿಗೆ ಮಧುಚಂದ್ರ ಭಾಗ್ಯವಿದೆ.
 
ಸಿಂಹ: ವಾಹನ, ಭೂಮಿ ಖರೀದಿಗೆ ಮುಂದಾಗುವಿರಿ. ಆದರೆ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಹಿರಿಯರ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಅಲೆದಾಡಬೇಕಾಗಬಹುದು. ಗೆಳೆಯರೊಂದಿಗೆ ನಿಷ್ಠುರ ಮಾಡಿಕೊಳ್ಳುವಿರಿ.
 
 
ಕನ್ಯಾ: ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗುವುದು. ಪ್ರವಾಸಾದಿ ವಿನೋದಗಳಿಗೆ ಧನವಿನಿಯೋಗವಾಗುವುದು. ವೈವಾಹಿಕ ಜೀವನದಲ್ಲಿ ಇದುವರೆಗೆ ಇದ್ದ ಅಸಮಾಧಾನಗಳು ದೂರವಾಗುವುದು.
 
ತುಲಾ: ಶುಭ ಮಂಗಲ ಕಾರ್ಯ ನಿಮಿತ್ತ ಕೌಟುಂಬಿಕವಾಗಿ ಜವಾಬ್ಧಾರಿ ಹೆಚ್ಚುವುದಲ್ಲದೇ ಧನವಿನಿಯೋಗ ಮಾಡಬೇಕಾಗುತ್ತದೆ. ವ್ಯಾಪಾರಿಗಳು ಪಾಲು ಬಂಡವಾಳ ವ್ಯವಹಾರದಲ್ಲಿ ಲಾಭ ಗಳಿಸುವರು.
 
ವೃಶ್ಚಿಕ: ಅನಿರೀಕ್ಷಿತ ರೂಪದಲ್ಲಿ ಸಹಾಯ ಒದಗಿ ಬರುವುದರಿಂದ ಎದುರಾಗುವ ಕಷ್ಟಗಳು ದೂರವಾಗುವುದು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು. ವ್ಯಾಪಾರ ವಹಿವಾಟಿನಲ್ಲಿ ಹಿತಶತ್ರುಗಳಿಂದ ವಂಚನೆಗೊಳಗಾದಂತೆ ಎಚ್ಚರವಹಿಸಿ.
 
ಧನು: ಕಾರ್ಯದೊತ್ತಡ ಹೆಚ್ಚುವುದು. ಆದರೆ ನಿಮ್ಮ ಹಠವಾದಿ ಧೋರಣೆಯಿಂದ ನೀವೇ ಎಲ್ಲಾ ಕಷ್ಟಗಳನ್ನೂ ಅನುಭವಿಸಬೇಕಾಗುತ್ತದೆ. ವಿನಾಕಾರಣ ಮಾನಸಿಕ ಉದ್ವೇಗಕ್ಕೊಳಗಾಗುವಿರಿ.  ನೆಮ್ಮದಿಗಾಗಿ ದೇವತಾ ಪ್ರಾರ್ಥನೆ ಮಾಡಿ.
 
ಮಕರ: ಉದ್ಯೋಗ ಕ್ಷೇತ್ರದಲ್ಲಿ ನೀವಂದುಕೊಂಡಂತೆ ಗುರಿ ಸಾಧನೆಯಾಗುವುದಲ್ಲದೆ, ಬಡ್ತಿ, ಮುನ್ನಡೆ ಯೋಗವಿದೆ. ಆದರೆ ಮಿತ್ರ ವರ್ಗದವರ ಅಸಮಾಧಾನಕ್ಕೆ ಕಾರಣರಾಗುವಿರಿ. ಭೂಮಿ, ವಾಹನ ಖರೀದಿಗೆ ಅನುಕೂಲ ವಾತಾವರಣವಿರಲಿದೆ.
 
ಕುಂಭ: ಎಷ್ಟೇ ಕಷ್ಟ ಬಂದರೂ ಅದಕ್ಕೆ ತಕ್ಕ ಫಲ ಸಿಗುತ್ತಿಲ್ಲವಲ್ಲ ಎಂಬ ಕೊರಗು ಕಾಡೀತು. ಆದರೆ ತಾಳ್ಮೆಯಿಂದಿರಿ. ವೃತ್ತಿ ರಂಗದಲ್ಲಿ ಅಸಮಾಧಾನಗಳಿದ್ದರೂ ಸಂಭಾಳಿಸಿಕೊಂಡು ಹೋಗಬೇಕಾಗುತ್ತದೆ. ಹಿರಿಯರ ಕೋಪಕ್ಕೆ ಗುರಿಯಾಗದಂತೆ ಎಚ್ಚರವಹಿಸಿ.
 
ಮೀನ: ವಿದ್ಯಾರ್ಥಿಗಳಿಗೆ ಅಭ್ಯಾಸದ ಕಡೆಗೆ ಗಮನ ಕಡಿಮೆಯಾಗಬಹುದು. ಒಂದು ರೀತಿಯ ಆಲಸ್ಯತನ ಕಂಡುಬರುವುದು. ಪ್ರೇಮಿಗಳಿಗೆ ಶುಭ ದಿನ. ಆರ್ಥಿಕ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                         ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಮಗುವಿನ ಅಕ್ಷರಾಭ್ಯಾಸಕ್ಕೆ ಈ ಮುಹೂರ್ತ ಸೂಕ್ತ

ಬೆಂಗಳೂರು: ಕೆಲವೊಂದು ಒಳ್ಳೆ ಕೆಲಸಗಳಿಗೆ ಒಳ್ಳೆಯ ಮುಹೂರ್ತ ಎಂದಿದೆ. ಯಾವುದೇ ಕೆಲಸ ಮಾಡುವುದಿದ್ದರೂ ...

news

ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?

ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?

ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ...