ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಬುಧವಾರ, 8 ಮೇ 2019 (06:53 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಹಿರಿಯರಿಂದ ಕಿರಿ ಕಿರಿ ಉಂಟಾಗಿ ಮನೆಯಲ್ಲಿ ಅಶಾಂತಿಯ ವಾತಾವರಣವಿರುವುದು. ಕಾರ್ಯ ನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ಬಾಕಿ ಹಣ ಪಾವತಿ ಬಗ್ಗೆ ಚಿಂತೆಯಾಗುವುದು. ಆದರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
 
ವೃಷಭ: ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದಾದರೂ ಮನಸ್ಸಿಗೆ ಹಿಡಿಸಿದ ಸಂಬಂಧ ಸಿಗಲು ಕೆಲವು ದಿನ ಕಾಯಲೇಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಆರ್ಥಿಕವಾಗಿ ಸಮಾಧಾನಕರ ದಿನ.
 
ಮಿಥುನ: ಕುಲದೇವರಿಗೆ ಸಂಬಂಧಪಟ್ಟ ಬಾಕಿ ಹರಕೆಗಳನ್ನು ತೀರಿಸಿದರೆ ಅಂದುಕೊಂಡ ಕಾರ್ಯಗಳು ಸುಗಮವಾಗಿ ನೆರವೇರುವುದು. ನೂತನ ದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ಸಿಗಲಿದೆ.
 
ಕರ್ಕಟಕ: ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನದಿಂದ ಮನೆಯಲ್ಲಿ ಕೆಲಸದೊತ್ತಡ ಹೆಚ್ಚುವುದು. ಮಹಿಳೆಯರಿಂದ ಶುಭವಾಗುವುದು. ಸಾಹಿತ್ಯ, ಕಲಾಕ್ಷೇತ್ರದಲ್ಲಿರುವವರಿಗೆ ಪ್ರಶಂಸೆ ಸಿಗುವುದು. ಆರ್ಥಿಕವಾಗಿ ಧನಾಗಮನವಾಗಲಿದೆ.
 
ಸಿಂಹ: ಮನೆ ಬದಲಾವಣೆ ಬಗ್ಗೆ ಚಿಂತನೆ ಮಾಡುವಿರಿ. ಉದ್ಯೋಗದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಆದರೆ ಅದಕ್ಕೆ ಕಠಿಣ ಪರಿಶ್ರಮ ಪಡಬೇಕು. ನೀರಿಗಾಗಿ ನೆರೆಹೊರೆಯವರೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ. ತಾಳ್ಮೆ ಅಗತ್ಯ.
 
 
ಕನ್ಯಾ: ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ ಎಂದು ಬೇಸರಪಟ್ಟುಕೊಳ್ಳಬೇಡಿ. ದೈವಾನುಕೂಲದಿಂದ ದಿನದಂತ್ಯಕ್ಕೆ ಶುಭವಾಗಲಿದೆ. ಉದ್ಯೋಗ ಬದಲಾವಣೆಗೆ ಚಿಂತನೆ ಮಾಡುವಿರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ತುಲಾ: ಕೌಟುಂಬಿಕವಾಗಿ ಜವಾಬ್ಧಾರಿ ಹೆಚ್ಚಲಿದೆ. ಅಪವಾದಗಳಿಗೆ ಗುರಿಯಾಗಬೇಕಾದೀತು. ಹಾಗಿದ್ದರೂ ನಿಮಗಿರುವ ಬೆಲೆ ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
 
ವೃಶ್ಚಿಕ: ಬಂದು ಮಿತ್ರರೊಂದಿಗೆ ಪ್ರವಾಸ ಕೈಗೊಳ್ಳುವಿರಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು. ಮಾನಸಿಕ ಉದ್ವೇಗಕ್ಕೊಳಗಾಗಿ ನಿರ್ಧಾರಗಳನ್ನು ಕೈಗೊಳ್ಳುವಾಗ ದುಡುಕಬೇಡಿ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಲಭಿಸುವುದು.
 
ಧನು: ಮಕ್ಕಳ ವಿಚಾರದಲ್ಲಿ ಸಂತಸದ ವಿಚಾರ ಕೇಳುವಿರಿ. ಆದರೆ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ಹೆಚ್ಚಲಿದೆ. ಸಂಗಾತಿಯ ಮಾತಿಗೆ ಕಿವಿಗೊಡಿ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ಹೆಚ್ಚುವುದು.
 
ಮಕರ: ವ್ಯಾಪಾರಿಗಳು ಕೊಂಚ ನಷ್ಟ ಅನುಭವಿಸುವರು. ನೌಕರ ವರ್ಗದವರಿಗೆ ಬಡ್ತಿ ಯೋಗವಿದೆ. ವಿದ್ಯಾರ್ಥಿಗಳು ಕಠಿಣ ಪರಿ‍ಶ್ರಮ ಪಡಬೇಕಾಗುತ್ತದೆ. ಸಾಂಸಾರಿಕವಾಗಿ ಸಂತಸದ ದಿನಗಳು. ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ಕಡಿವಾಣವಿರಲಿ.
 
ಕುಂಭ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಔದ್ಯೋಗಿಕ ಕ್ಷೇತ್ರದಲ್ಲಿ ಲಾಭದಾಯಕ ಹುದ್ದೆ ಸಿಗುವ ಸಾಧ್ಯತೆಯಿದೆ. ಪಾಲು ಬಂಡವಾಳ ಹೂಡಿಕೆ ಮಾಡುವಾಗ ವಂಚನೆಗೊಳಗಾದಂತೆ ಎಚ್ಚರವಹಿಸಿ. ಕಳೆದು ಹೋದ ವಸ್ತುಗಳು ಮರಳಿ ಸಿಗಲಿವೆ.
 
ಮೀನ: ಅನಗತ್ಯ ಮಾನಸಿಕ ಚಿಂತೆಗಳಿಗೆ ಕಡಿವಾಣ ಹಾಕಿ. ವೃತ್ತಿರಂಗದಲ್ಲಿ ಕಿರಿ ಕಿರಿ ಇದ್ದರೂ ಹೊಂದಿಕೊಂಡು ಹೋಗಬೇಕಾಗುತ್ತದೆ. ಮನೋಕಾಮನೆಗಳು ನೆರವೇರಲು ಸತತ ಪ್ರಯತ್ನ ಅಗತ್ಯ. ದಿನದಂತ್ಯಕ್ಕೆ ಶುಭ ಸುದ್ದಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಈ ದಿನ ಸಾಲ ಕೊಡುವುದು, ತರುವುದು ಮಾಡಲೇಬಾರದು!

ಬೆಂಗಳೂರು: ಕೆಲವೊಂದು ಒಳ್ಳೆ ಕೆಲಸಗಳಿಗೆ ಒಳ್ಳೆಯ ಮುಹೂರ್ತ ಎಂದಿದೆ. ಯಾವುದೇ ಕೆಲಸ ಮಾಡುವುದಿದ್ದರೂ ...

news

ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?

ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಮಗುವಿನ ಅಕ್ಷರಾಭ್ಯಾಸಕ್ಕೆ ಈ ಮುಹೂರ್ತ ಸೂಕ್ತ

ಬೆಂಗಳೂರು: ಕೆಲವೊಂದು ಒಳ್ಳೆ ಕೆಲಸಗಳಿಗೆ ಒಳ್ಳೆಯ ಮುಹೂರ್ತ ಎಂದಿದೆ. ಯಾವುದೇ ಕೆಲಸ ಮಾಡುವುದಿದ್ದರೂ ...