ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಮಂಗಳವಾರ, 14 ಮೇ 2019 (06:55 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಸ್ವಯಂ ಪ್ರಯತ್ನಬಲದಿಂದ ಮುಂದುವರಿದರೆ ಕಾರ್ಯಗಳಲ್ಲಿ ಯಶಸ್ಸು. ವಿವಾಹ ಪ್ರಯತ್ನಗಳಿಗೆ ಅಡ್ಡಿ ಆತಂಕ ಎದುರಾಗಬಹುದು. ಆರ್ಥಿಕವಾಗಿ ಧನಾಗಮನವಾಗಿ ನೆಮ್ಮದಿ ಮೂಡಲಿದೆ.
 
ವೃಷಭ: ಮಾನಸಿಕ ಚಿಂತೆಯಿಂದ ಒಂದು ರೀತಿಯ ಉದಾಸೀನ ಭಾವ ಬರಲಿದೆ. ಕಾರ್ಯದಲ್ಲಿ ನಿರುತ್ಸಾಹ ತೋರಿಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಾಂಸಾರಿಕವಾಗಿ ಹಿರಿಯರ ಮಾತಿಗೆ ಮನ್ನಣೆ ಕೊಡಬೇಕಾದೀತು.
 
ಮಿಥುನ: ನಿರುದ್ಯೋಗಿಗಳಿಗೆ ಉದ್ಯೊಗ ಲಾಭವಾಗಲಿದೆ. ನಿಮ್ಮ ಪ್ರಯತ್ನ ಬಲಕ್ಕೆ ತಕ್ಕ ಫಲ ಸಿಗಲಿದೆ. ಕೌಟುಂಬಿಕವಾಗಿ ಜವಾಬ್ಧಾರಿ ಹೆಚ್ಚಲಿದೆ. ರಾಜಕೀಯವಾಗಿ ಸ್ಥಾನ ಮಾನ ಉತ್ತಮವಾಗುವುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
 
ಕರ್ಕಟಕ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ಕೃಷಿ ಕ್ಷೇತ್ರದವರು ನಷ್ಟ ಅನುಭವಿಸುವರು. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುವುದು. ನಿರ್ಧಾರ ಕೈಗೊಳ್ಳುವಾಗ ಒತ್ತಡಕ್ಕೆ ಒಳಗಾಗದಿರಿ.
 
ಸಿಂಹ: ಕುಟುಂಬ ವರ್ಗದಲ್ಲಿ ಭಿನ್ನಾಭಿಪ್ರಾಯ ತಲೆದೋರಲಿವೆ. ಹೀಗಾಗಿ ಮಾತಿನ ಮೇಲೆ ನಿಗಾ ಅಗತ್ಯ. ವೈವಾಹಿಕ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಎಚ್ಚರಿಕೆ ಅಗತ್ಯ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
 
ಕನ್ಯಾ: ಕೈಗೊಂಡ ಕಾರ್ಯಗಳಲ್ಲಿ ಪ್ರಗತಿ, ಮುನ್ನಡೆ ಗಳಿಸುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಎಚ್ಚರ ಅಗತ್ಯ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.
 
ತುಲಾ: ನಿರುದ್ಯೋಗಿಗಳಿಗೆ ಮನಸ್ಸಿಗೆ ಹಿಡಿಸಿದ ಕೆಲಸ ಸಿಕ್ಕದೇ ಇದ್ದರೂ, ಸದ್ಯಕ್ಕೆ ಕೈಗೆ ಬಂದ ಅವಕಾಶವನ್ನು ಬಳಸಿಕೊಳ್ಳುವುದೇ ಒಳ್ಳೆಯದು. ಮನೆಯಲ್ಲಿ ಶುಭ ಕಾರ್ಯ ನೆರವೇರಿಸಲು ಇದುವೇ ಸೂಕ್ತ ಸಮಯ.
 
ವೃಶ್ಚಿಕ: ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಮಾತ್ರ ಯಶಸ್ಸು. ವ್ಯಾಪಾರಿಗಳು ಬಂಡವಾಳ ಹೂಡಿಕೆ ಮಾಡುವಾಗ ಕಾಗದ ಪತ್ರಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ನೆರೆಹೊರೆಯವರೊಂದಿಗೆ ನಿಷ್ಠುರ ಮಾಡಿಕೊಳ್ಳಬೇಡಿ.
 
ಧನು: ನಿಮ್ಮ ಮೂಗಿನ ನೇರಕ್ಕೆ ನಿರ್ಧಾರ ಕೈಗೊಳ್ಳುವುದರಿಂದ ಇತರರ ಅಸಮಾಧಾನಕ್ಕೆ ಕಾರಣರಾಗುವಿರಿ. ದುಡುಕಿನ ಮಾತನಿಂದ ಮನೆ ಹಾಳು ಎಂಬುದನ್ನು ಮರೆಯಬೇಡಿ. ಆರೋಗ್ಯದ ಬಗ್ಗೆ ಕಾಳಜಿ ಮಾಡಿ.
 
ಮಕರ: ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದ ಸಂಬಂಧಗಳು ಕೂಡಿಬರಲಿದೆ. ಭೂಮಿ ಖರೀದಿ, ಮನೆ ಬದಲಾವಣೆ ಬಗ್ಗೆ ಚಿಂತನೆ ಮಾಡುವಿರಿ. ನಿರುದ್ಯೋಗಿಗಳು ಉದ್ಯೋಗ ಅರಸಿಕೊಂಡು ದೂರ ಪ್ರಯಾಣ ಮಾಡಬೇಕಾದೀತು.
 
ಕುಂಭ: ದಾಯಾದಿಗಳೊಂದಿಗೆ ಇದ್ದ ವೈಷಮ್ಯಗಳು ದೂರವಾಗುವುದು. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ. ಸಮಾಧಾನದಿಂದ ಸರಿದೂಗಿಸಿಕೊಂಡು ಹೋಗಬೇಕಾಗುವುದು. ದೇವತಾ ಕಾರ್ಯದಿಂದ ಮನಸ್ಸಿಗೆ ನೆಮ್ಮದಿ.
 
ಮೀನ: ದೃಢ ಚಿತ್ತದಿಂದ ನಿರ್ಧಾರ ಕೈಗೊಳ್ಳಬೇಕಾದ ಸಮಯವಿದು. ಹೆಚ್ಚಿನ ಕಾರ್ಯಲಾಭವಾಗಬೇಕಾದರೆ ಕುಲದೇವರ ಪ್ರಾರ್ಥನೆ ಮಾಡಿ ಮುಂದುವರಿಯಿರಿ. ಸಾಲಗಳು ಮರುಪಾವತಿಯಾಗಿ ಆರ್ಥಿಕವಾಗಿ ಚೇತರಿಕೆ ಕಾಣುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಯಾವ ರಾಶಿಗೆ ಯಾವ ರಾಶಿಯವರೊಡನೆ ಸ್ನೇಹ ಮೂಡುತ್ತದೆ?

ಬೆಂಗಳೂರು: ಕೆಲವೊಂದು ರಾಶಿಯವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಹಾಗೇ ಕೆಲವೊಂದು ರಾಶಿಯವರು ಪರಸ್ಪರ ...

news

ವಿಷ್ಣು ಸಹಸ್ರನಾಮ ಓದುವುದರಿಂದ ಈ ಎಲ್ಲಾ ಫಲಗಳು ಸಿಗುತ್ತವೆ

ಬೆಂಗಳೂರು: ಒಬ್ಬೊಬ್ಬ ದೇವತೆಯ ಉಪಾಸನೆ ಮಾಡಿದರೆ ಒಂದೊಂದು ಫಲ ಸಿಗುತ್ತದೆ. ಬೃಹಸ್ಪತಿಯ ಆರಾಧನೆಯಿಂದ ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.