ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಬುಧವಾರ, 15 ಮೇ 2019 (07:25 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 


ಮೇಷ: ಕೌಟುಂಬಿಕವಾಗಿ ಸಂತೋಷದ ಸಮಯ ನಿಮ್ಮದಾಗಿರುತ್ತದೆ. ಇಷ್ಟ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಾಗದು. ಆದರೆ ದಾಯಾದಿಗಳ ಅಸಮಾಧಾನಕ್ಕೆ ಕಾರಣರಾಗುವಿರಿ.
 
ವೃಷಭ: ಸಾಂಸಾರಿಕವಾಗಿ ಮನಸ್ಸಿಗೆ ನೆಮ್ಮದಿ ಇರುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಇರಲಿದೆ.
 
ಮಿಥುನ: ಕಾರ್ಯ ಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡವಿರುತ್ತದೆ. ಇದರಿಂದ ದೇಹಾಯಾಸವಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯ ನಡೆಸಲು ತಯಾರಿ ನಡೆಸುತ್ತೀರಿ. ವ್ಯವಹಾರದಲ್ಲಿ ನಿವ್ವಳ ಲಾಭ ಗಳಿಸುವಿರಿ.
 
ಕರ್ಕಟಕ: ದೈವಾನುಕೂಲದಿಂದ ಇದುವರೆಗೆ ಕೈಗೆಟುಕದ ಕಾರ್ಯ ಇಂದು ನೆರವೇರಲಿದೆ. ಕುಲದೇವರ ದರ್ಶನ ಭಾಗ್ಯ ಸಿಗಲಿದೆ. ಶೀತ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗುವುದು.
 
ಸಿಂಹ: ದಾಯಾದಿಗಳೊಂದಿಗೆ ಮುನಿಸು ಮರೆತು ಸಂಧಾನಕ್ಕೆ ಮುಂದಾಗುವಿರಿ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಕೌಟುಂಬಿಕವಾಗಿ ಕೆಲವೊಂದು ಜವಾಬ್ಧಾರಿ ಹೊರಬೇಕಾಗುತ್ತದೆ. ಅನಿರೀಕ್ಷಿತ ಖರ್ಚುಗಳಿಗೆ ಸಿದ್ಧರಾಗಿ.
 
 
ಕನ್ಯಾ: ವ್ಯಾಪಾರಿ ವರ್ಗದವರು ವಂಚನೆಗೊಳಗಾದಂತೆ ಎಚ್ಚರಿಕೆ ವಹಿಸಬೇಕು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗಬಹುದು. ಆದರೆ ಸಾಲಗಾರರು ಹಣ ಮರುಪಾವತಿ ಮಾಡುತ್ತಾರೆ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.
 
ತುಲಾ: ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಕೊಂಚ ಹಿನ್ನಡೆಯಾದೀತು. ಸಂಗಾತಿಯ ಅಲಂಕಾರಿಕ ವಸ್ತುಗಳಿಗೆ ಹಣ ಖರ್ಚು ಮಾಡಬೇಕಾಗುತ್ತದೆ. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಭೂ, ಗೃಹ ಖರೀದಿಗೆ ಮುಂದಾಗುವಿರಿ.
 
ವೃಶ್ಚಿಕ: ಆಗಾಗ ಖರ್ಚು ವೆಚ್ಚಗಳು ಅಧಿಕವಾಗಲಿದೆ. ನೌಕರ ವರ್ಗಕ್ಕೆ ಉದ್ಯೋಗದಲ್ಲಿ ವರ್ಗಾವಣೆ, ಬದಲಾವಣೆಯಾಗಬಹುದು. ಕೃಷಿಕರಿಗೆ ನಿವ್ವಳ ಲಾಭಾಗುವುದು. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ.
 
ಧನು: ನೀವು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಅನುಭವಿಸಬೇಕಾದೀತು. ಗೃಹ ಸಂಬಂಧೀ ಕೆಲಸಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.
 
ಮಕರ: ವಿವಾಹ ಸಂಬಂಧೀ ಮಾತುಕತೆಗಳಲ್ಲಿ ಆಸಕ್ತಿ ತೋರುವಿರಿ. ಹೊಸ ವ್ಯವಹಾರಗಳಿಗೆ ಕೈ ಹಾಕುವುದಿದ್ದರೆ ಕೂಲಂಕುಷವಾಗಿ ಚಿಂತನೆ ಮಾಡುವುದು ಒಳ್ಳೆಯದು. ಆರೋಗ್ಯದಲ್ಲಿ ಏರುಪೇರಾಗಬಹುದು.
 
ಕುಂಭ: ಮನೆ ಮಾಲಿಕರಿಂದ ಕಿರಿ ಕಿರಿಯಾಗಬಹುದು. ಮನೆ ಬದಲಾವಣೆ ಬಗ್ಗೆ ಚಿಂತನೆ ಮಾಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ನಿಮ್ಮ ಏಳಿಗೆಗೆ ಅಸೂಯೆ ಪಡಬಹುದು. ದೈವತಾ ಪ್ರಾರ್ಥನೆಯಿಂದ ಎಲ್ಲವೂ ಶುಭವಾಗುತ್ತದೆ.
 
ಮೀನ: ಮಹಿಳೆಯರಿಂದ ಅಪವಾದದ ಭೀತಿಯಿದೆ. ಅನಗತ್ಯ ವಿಚಾರಗಳಿಗೆ ಮೂಗು ತೂರಿಸಲು ಹೋಗಬೇಡಿ. ಹೆಚ್ಚಿನ ಹಣ ಸಂಪಾದನೆಗೆ ನಾನಾ ಮಾರ್ಗ ಹುಡುಕುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಿಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಭಯ ನಾಶವಾಗಬೇಕಾದರೆ ಈ ರೀತಿ ಮಾಡಬೇಕು

ಬೆಂಗಳೂರು: ಧೈರ್ಯಂ ಸರ್ವತ್ರ ಸಾಧನಂ ಎನ್ನುತ್ತಾರೆ. ಭಯವಿದ್ದರೆ ಯಾವುದೇ ಕೆಲಸವೂ ನಡೆಯದು. ಭಯವಿದ್ದರೆ ...

news

ಯಾವ ರಾಶಿಗೆ ಯಾವ ರಾಶಿಯವರೊಡನೆ ಸ್ನೇಹ ಮೂಡುತ್ತದೆ?

ಬೆಂಗಳೂರು: ಕೆಲವೊಂದು ರಾಶಿಯವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಹಾಗೇ ಕೆಲವೊಂದು ರಾಶಿಯವರು ಪರಸ್ಪರ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಯಾವ ರಾಶಿಗೆ ಯಾವ ರಾಶಿಯವರೊಡನೆ ಸ್ನೇಹ ಮೂಡುತ್ತದೆ?

ಬೆಂಗಳೂರು: ಕೆಲವೊಂದು ರಾಶಿಯವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಹಾಗೇ ಕೆಲವೊಂದು ರಾಶಿಯವರು ಪರಸ್ಪರ ...