ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶುಕ್ರವಾರ, 17 ಮೇ 2019 (08:00 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬದಲವಾಣೆ, ಸ್ಥಾನಪಲ್ಲಟ ಭಾಗ್ಯ. ವ್ಯಾಪಾರ, ವ್ಯವಹರಾಗಳಲ್ಲಿ ಮೇಲುಗೈ ಸಾಧಿಸಲಿದ್ದೀರಿ. ದೂರ ಸಂಚಾರ ಮಾಡುವುದರಿಂದ ಕಾರ್ಯ ಸಾಧನೆಯಾಗಲಿದೆ.
 
ವೃಷಭ: ಪ್ರೇಮಿಗಳಿಗೆ ಹಿರಿಯರಿಂದ ಒಪ್ಪಿಗೆ ಸಿಗಲಿದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ಸಂಗಾತಿಯ ಮನಸ್ಸಿಗೆ ಬೇಸರವುಂಟುಮಾಡಬಹುದು. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.
 
ಮಿಥುನ: ತಾಳ್ಮೆಯಿಂದಿದ್ದಷ್ಟು ಒಳ್ಳೆಯದು. ವಾದ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ನಿರ್ಧಾರ ಕೈಗೊಳ್ಳುವಾಗ ಗೊಂದಲವುಂಟಾಗಬಹುದು.
 
ಕರ್ಕಟಕ: ನೂತನ ದಂಪತಿಗಳು ಅಂದುಕೊಂಡಿದ್ದ ಕಾರ್ಯ ಪೂರ್ತಿ ಮಾಡಲಿದ್ದಾರೆ. ಸಹಕಾರ ಮನೋಭಾವದಿಂದ ಮುಂದುವರಿಯಬೇಕು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದ್ದೀರಿ. ದಿನದಂತ್ಯಕ್ಕೆ ಶುಭ ಸುದ್ದಿ.
 
ಸಿಂಹ: ಸಾಮಾಜಿಕ ಕಾರ್ಯಗಳಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಸಾಲ ಕೇಳಿಕೊಂಡುಬರುವವರಿಗೆ ಸಾಲ ಕೊಡಲು ಹೋಗಬೇಡಿ. ಮರಳಿ ಬಾರದು. ಮಹಿಳೆಯರಿಂದ ಅಪವಾದದ ಭೀತಿ.
 
 
ಕನ್ಯಾ: ಆಗಾಗ ಮನೆಯವರೊಡನೆ ಕಲಹವಾದೀತು. ಕೌಟುಂಬಿಕ ಜವಾಬ್ಧಾರಿಗಳನ್ನು ಪೂರ್ತಿ ಮಾಡಲು ಓಡಾಟ ನಡೆಸಬೇಕಾಗುತ್ತದೆ. ಹಳೇ ಶತ್ರುಗಳಿಂದ ಮತ್ತೆ ತೊಂದರೆ ಎದುರಾದೀತು. ಪತ್ನಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
 
ತುಲಾ: ವಾಣಿಜ್ಯೋದ್ಯಮಿಗಳಿಗೆ ಲಾಭದ ದಿನ. ಬಂಧು ಮಿತ್ರರೊಂದಿಗೆ ಪ್ರವಾಸ ಕೈಗೊಳ್ಳುವಿರಿ. ಆರ್ಥಿಕವಾಗಿ ಋಣಬಾಧೆಗಳಿಂದ ಮುಕ್ತರಾಗುವಿರಿ. ಅಧಿಕಾರಿ ವರ್ಗದವರಿಗೆ ಬಡ್ತಿ, ಮುನ್ನಡೆ ಯೋಗವಿದೆ.
 
ವೃಶ್ಚಿಕ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಯತ್ನದಲ್ಲಿ ಹಿನ್ನಡೆಯಾದೀತು. ಕುಲದೇವರ ಪ್ರಾರ್ಥನೆ ಮಾಡಿದರೆ ಒಳ್ಳೆಯದು. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು. ವಾಹನ ಚಾಲನೆ ಮಾಡುವವರು ಎಚ್ಚರವಾಗಿದ್ದರೆ ಒಳ್ಳೆಯದು.
 
ಧನು: ಮಕ್ಕಳ ವಿಚಾರಕ್ಕೆ ಅಧಿಕ ಖರ್ಚು ವೆಚ್ಚಗಳಾಗಲಿವೆ. ಸಂಗಾತಿಯ ಅಲಂಕಾರಿಕ ವಸ್ತುಗಳ ಖರೀದಿ ಮಾಡುವಿರಿ. ಮನೆಯಲ್ಲಿ ಕಳ್ಳತನ ಭೀತಿಯಿದೆ. ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾದೀತು.
 
ಮಕರ: ಅಧಿಕಾರಿಗಳಿಗೆ ಮುಂಬಡ್ತಿಯ ಯೋಗವಿದೆ. ಭೂ, ಆಸ್ತಿ ಖರೀದಿ ವ್ಯವಹಾರಗಳಲ್ಲಿ ಲಾಭವಾಗಲಿದೆ. ಆದರೆ ಖರ್ಚು ವೆಚ್ಚಗಳ ಬಗ್ಗೆ ನಿಗಾ ವಹಿಸಬೇಕು.  ನೌಕರ ವರ್ಗದವರಿಗೆ ಹಿತಶತ್ರುಗಳ ಕಾಟ ತಪ್ಪದು.
 
ಕುಂಭ: ಮಾನಸಿಕವಾಗಿ ನಾನಾ ರೀತಿಯ ಚಿಂತೆಗಳು ಕಾಡಲಿವೆ. ಕೌಟುಂಬಿಕ ಜವಾಬ್ಧಾರಿಗಳನ್ನು ಉತ್ತಮವಾಗಿ ನಿಭಾಯಿಸಿದ ತೃಪ್ತಿ ನಿಮ್ಮದಾಗಲಿದೆ. ಸಾಮಾಜಿಕವಾಗಿ ಮೆಚ್ಚುಗೆ ಗಳಿಸುವಿರಿ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ಮೀನ: ನ್ಯಾಯಾಲಯ ಕಲಾಪಗಳಲ್ಲಿ ಜಯ ನಿಮ್ಮದಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ವಾಹನ ಖರೀದಿ ಯೋಗವಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಆರ್ಥಿಕವಾಗಿ ಕೊಂಚ ಸಮಾಧಾನಕರ ದಿನ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?

ಬೆಂಗಳೂರು: ಒಟ್ಟು 27 ನಕ್ಷತ್ರಗಳಿದ್ದು, ಪ್ರತಿಯೊಂದು ನಕ್ಷತ್ರಕ್ಕೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ...

news

ಯಾವ ರಾಶಿಗೆ ಯಾವ ರಾಶಿಯವರೊಡನೆ ಸ್ನೇಹ ಮೂಡುತ್ತದೆ?

ಬೆಂಗಳೂರು: ಕೆಲವೊಂದು ರಾಶಿಯವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಹಾಗೇ ಕೆಲವೊಂದು ರಾಶಿಯವರು ಪರಸ್ಪರ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಓಂಕಾರಕ್ಕೆ ಮೊದಲ ಆದ್ಯತೆ ಯಾಕೆ ಎನ್ನುವುದು ಗೊತ್ತಾ?

ಬೆಂಗಳೂರು: ಎಲ್ಲದಕ್ಕೂ ಮೊದಲು ಓಂಕಾರ ಹಾಕುವುದು ಎಂಬ ಮಾತಿದೆ. ಅಷ್ಟಕ್ಕೂ ಹಿಂದೂ ಸಂಪ್ರದಾಯದಲ್ಲಿ ...