ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಹಂತ ಹಂತವಾಗಿ ಆರ್ಥಿಕವಾಗಿ ಪ್ರಗತಿ ಕಂಡುಬರಲಿದ್ದು, ತುಸು ಸಮಾಧಾನ ಮೂಡಲಿದೆ. ಉದ್ದೇಶಿತ ಕಾರ್ಯಗಳನ್ನು ಪೂರ್ತಿ ಮಾಡುವಿರಿ. ಆದರೆ ಖರ್ಚು ವೆಚ್ಚದ ಬಗ್ಗೆ ಮಿತಿಯಿರಲಿ. ಆರೋಗ್ಯ ಸುಧಾರಿಸುವುದು.ವೃಷಭ: ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅಭಿವೃದ್ಧಿ, ಮುನ್ನಡೆ ತೋರಿಬರಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವುದು. ಹಿತವಂಚಕರ ಬಗ್ಗೆ ಎಚ್ಚರಿಕೆ ಅಗತ್ಯ. ಆರೋಗ್ಯದಲ್ಲಿ ಸುಧಾರಣೆ.ಮಿಥುನ: ಭೂಮಿ, ಮನೆ ಖರೀದಿ ವ್ಯವಹಾರದಲ್ಲಿ