ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದೇ ನಿರಾಸೆಯಾಗಬಹುದು. ಸಾಮಾಜಿಕ ಕೆಲಸಗಳಿಗೆ ಹಿತಶತ್ರುಗಳಿಂದ ಅಡ್ಡಿ ಆತಂಕ ಎದುರಾಗಲಿದೆ. ಸಾಹಿತ್ಯ, ಕಲಾ ಕ್ಷೇತ್ರದಲ್ಲಿರುವವರಿಗೆ ಮುನ್ನಡೆ.ವೃಷಭ: ಅಧಿಕಾರಿ ವರ್ಗದವರಿಗೆ ಕಾರ್ಯದೊತ್ತಡ ಹೆಚ್ಚಬಹುದು. ಮಹಿಳೆಯರಿಂದ ಅಪವಾದದ ಭೀತಿ ಇರಲಿದೆ. ಎಚ್ಚರಿಕೆಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ಮಿಥುನ: ವೃತ್ತಿರಂಗದಲ್ಲಿ ವಿನಾಕಾರಣ ಸಹೋದ್ಯೋಗಿಗಳಿಂದ ನಿಷ್ಠುರಕ್ಕೊಳಗಾಗುವಿರಿ. ಕೆಲಸ ಕಾರ್ಯಗಳಿಗೆ ವಿಘ್ನ ತೋರಿಬಂದೀತು. ಆದರೆ ಧನಾಗಮನಕ್ಕೆ ಕೊರತೆಯಾಗದು.