ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಮನೆಯಲ್ಲಿ ಕಿರಿ ಕಿರಿ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಮುನಿಸು ಮುಂದುವರಿಯುವುದು. ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಖರ್ಚು ವೆಚ್ಚಗಳು ಹೆಚ್ಚಾಗಲಿವೆ.ವೃಷಭ: ದೂರ ಸಂಚಾರದಲ್ಲಿ ಅಡೆತಡೆಗಳಿದ್ದರೂ ಕಾರ್ಯಾನುಕೂಲವಾಗಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಕಷ್ಟಕ್ಕೆ ಮರುಗುವ ನಿಮ್ಮ ಗುಣವನ್ನು ಇತರರು ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿ.ಮಿಥುನ: ಕೆಲವೊಮ್ಮೆ ಎಷ್ಟೇ ಒಳ್ಳೆ ಕೆಲಸ ಮಾಡಿದರೂ ಚಾಡಿ ಮಾತು ಕೇಳಬೇಕಾಗುತ್ತದೆ.