ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಗುರುವಾರ, 30 ಮೇ 2019 (08:52 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 


ಮೇಷ: ಸಾಂಸಾರಿಕವಾಗಿ ಸಾಕಷ್ಟು ಸಮಸ್ಯೆಗಳು ನಿಮ್ಮನ್ನು ಹೈರಾಣಾಗಿಸಲಿದೆ. ಹಿರಿಯರ ಆರೋಗ್ಯ ಸಮಸ್ಯೆಗಳು ನಿಮ್ಮ ಚಿಂತೆ ಹೆಚ್ಚಿಸುವುದು. ಆದರೆ ಉದ್ಯೋಗದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಹೊಸ ವಸ್ತುಗಳ ಖರೀದಿಗೆ ಮುಂದಾಗುವಿರಿ.
 
ವೃಷಭ: ಕಾರ್ಯಕ್ಷೇತ್ರದಲ್ಲಿ ವಿರೋಧಿಗಳಿಂದ ಅಡ್ಡಿ ಆತಂಕಗಳು ಎದುರಾಗುವುದು. ನಿರುದ್ಯೋಗಿಗಳು ಹೊಸ ಉದ್ಯೋಗ ಮಾರ್ಗಗಳನ್ನು ಕಂಡುಕೊಳ್ಳುವರು.  ಆದರೆ ವಿನಾಕಾರಣ ಅಪವಾದಕ್ಕೆ ಗುರಿಯಾಗುವಿರಿ.
 
ಮಿಥುನ: ಪತ್ನಿ ಮತ್ತು ಮಕ್ಕಳಿಂದ ಅಸಹಕಾರ ಉಂಟಾಗಬಹುದು. ಇದು ನಿಮ್ಮ ಕಾರ್ಯಗಳಿಗೆ ತೀವ್ರ ಹಿನ್ನಡೆ ಉಂಟುಮಾಡಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ವ್ಯಾಪಾರ ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ.
 
ಕರ್ಕಟಕ: ವಿದ್ಯಾರ್ಥಿಗಳು ಶಿಕ್ಷಕರ ಪ್ರಶಂಸೆಗೊಳಗಾಗುವರು. ಬಂಧು ಮಿತ್ರರು ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರುವರು. ಕೆಲವೊಂದು ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.
 
ಸಿಂಹ: ದೈವಾನುಕೂಲದಿಂದ ಇಂದು ನಿಮ್ಮ ಉದ್ಯೋಗ ಕ್ಷೇತ್ರ ಮತ್ತು ಮನೆಯಲ್ಲಿ ನೆಮ್ಮದಿಯ ವಾತಾವರಣವಿರುವುದು. ನಿಮಗೆ ಅನುಕೂಲಕರವಾದ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆಯಲಿದೆ. ಅನಿರೀಕ್ಷಿತ ಶುಭ ವಾರ್ತೆಯೂ ಇದೆ.
 
 
ಕನ್ಯಾ: ವೃತ್ತಿ ರಂಗದಲ್ಲಿ ಸ್ಥಾನ ಪಲ್ಲಟವಾಗುವ ಸಾಧ್ಯತೆಯಿದೆ.  ಸಣ್ಣ ವ್ಯಾಪಾರಿಗಳಿಗೆ ನಿವ್ವಳ ಲಾಭವಾಗುವುದು. ಆದರೆ ಖರ್ಚು ವೆಚ್ಚಗಳ ಬಗ್ಗೆ ಹಿಡಿತ ಅಗತ್ಯ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ತುಲಾ: ದಾಂಪತ್ಯದಲ್ಲಿ ಸುಖ ಸಮೃದ್ಧಿ ಇರಲಿದೆ. ನಿಮ್ಮ ಕೆಲಸಗಳಿಗೆ ಸಂಗಾತಿಯಿಂದ ಸಹಕಾರ ಸಿಗುವುದು. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದೆ. ಆದರೆ ಸಾಲ ಕೊಡಲು ಹೋಗಬೇಡಿ. ಮರಳಿ ಬಾರದು.
 
ವೃಶ್ಚಿಕ: ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ನಿಮ್ಮ ಕಾಳಜಿಯೇ ಅವರ ಶ್ರೀರಕ್ಷೆಯಾಗಲಿದೆ. ಆರ್ಥಿಕವಾಗಿ ಸಮಾಧಾನಕರ ದಿನ. ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ತಾಳ್ಮೆ ಅಗತ್ಯ.
 
ಧನು: ವಾಸ ಸ್ಥಳ ಅಥವಾ ಮನೆ ಬದಲಾವಣೆ ಮಾಡಲಿದ್ದಿರಿ. ನೀರಿಗಾಗಿ ಪರದಾಟ ತಪ್ಪದು. ಮಕ್ಕಳಿಂದ ಶುಭ ಸುದ್ದಿ ಆಲಿಸುವಿರಿ. ಧನಾಗಮನಕ್ಕೆ ಕೊರತೆಯಿರದು. ಆದರೆ ಆರೋಗ್ಯ ಭಾಗ್ಯ ಹದಗೆಡಬಹುದು.
 
ಮಕರ: ಭೂ ಸಂಬಂಧೀ ವ್ಯವಹಾರಗಳಾದ ಆಸ್ತಿ, ಮನೆ ಖರೀದಿಯಲ್ಲಿ ಜಯ ಗಳಿಸುವಿರಿ. ದಾಯಾದಿಗಳು ನಿಮ್ಮ ಏಳಿಗೆಗೆ ಅಸೂಯೆಪಡುವರು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.
 
ಕುಂಭ: ಮಕ್ಕಳಿಂದ ನಿಮ್ಮ ಚಿಂತೆ ಹೆಚ್ಚಾಗುವುದು. ಮಹಿಳಾ ಉದ್ಯೋಗಿಗಳಿಗೆ ಮುನ್ನಡೆ ಯೋಗವಿದೆ. ಶೀತ ಸಂಬಂಧೀ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.
 
ಮೀನ: ರಾಜಕೀಯವಾಗಿ ನಿಮ್ಮ ಸ್ಥಾನ ಮಾನಗಳು ಹೆಚ್ಚುವುದು. ಕುಟುಂಬ ಸದಸ್ಯರ ಕಷ್ಟಗಳಿಗೆ ಸ್ಪಂದಿಸಬೇಕಾಗುತ್ತದೆ. ಪ್ರೇಮಿಗಳಿಗೆ ಶುಭ ದಿನ. ಸಂತಾನ ಹೀನ ದಂಪತಿ ಧಾರ್ಮಿಕ ಪ್ರಾರ್ಥನೆಗೆ ಮೊರೆ ಹೋಗಬೇಕಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?

ಬೆಂಗಳೂರು: ಒಟ್ಟು 27 ನಕ್ಷತ್ರಗಳಿದ್ದು, ಪ್ರತಿಯೊಂದು ನಕ್ಷತ್ರಕ್ಕೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಈ ಸಮಯದಲ್ಲಿ ಲೈಂಗಿಕ ಸಂಬಂಧ ಬೆಳೆಸಿದರೆ ಜೀವನ ಸರ್ವನಾಶವಾಗುತ್ತದೆ

ಬೆಂಗಳೂರು : ಲೈಂಗಿಕ ಸಂಬಂಧ ದಾಂಪತ್ಯ ಜೀವನವನ್ನು ಗಟ್ಟಿಯಾಗಿಸುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ...

news

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?

ಬೆಂಗಳೂರು: ಒಟ್ಟು 27 ನಕ್ಷತ್ರಗಳಿದ್ದು, ಪ್ರತಿಯೊಂದು ನಕ್ಷತ್ರಕ್ಕೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ...