Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 6 ಜೂನ್ 2019 (08:59 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮಕ್ಕಳ ಭವಿಷ್ಯದ ವಿಚಾರವಾಗಿ ಚಿಂತೆ ಮಾಡುವಿರಿ. ಆರೋಗ್ಯಯ ಸಮಸ್ಯೆ ಕಂಡುಬರಬಹುದು. ವಾಸ ಸ್ಥಳ ಬದಲಾವಣೆ ಬಗ್ಗೆ ಚಿಂತನೆ ಮಾಡುವಿರಿ. ಬಾಕಿ ಹಣ ಪಾವತಿಯಾಗುವುದರಿಂದ ನೆಮ್ಮದಿಯಾಗಲಿದೆ.
 
ವೃಷಭ: ಕಾರ್ಯ ಸಾಧನೆಗೆ ದೂರ ಸಂಚಾರ ಮಾಡುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಕಷ್ಟದಲ್ಲಿರುವ ಮಿತ್ರರ ಸಹಾಯಕ್ಕೆ ಧಾವಿಸುವಿರಿ. ಈ ಸಹಾಯ ಮುಂದೊಂದು ದಿನ ನಿಮಗೆ ಒಳಿತು ಮಾಡಲಿದೆ.
 
ಮಿಥುನ: ದುಡುಕು ಮಾತಿನಿಂದ ಸಂಬಂಧ ಹಾಳುಮಾಡಿಕೊಳ್ಳಬೇಡಿ. ಹಿತಶತ್ರುಗಳಿಂದ ದೂರವಿದ್ದಷ್ಟು ಒಳ್ಳೆಯದು. ಸಂಗಾತಿಯ ಸಲಹೆಗಳಿಗೆ ಕಿವಿಗೊಡಿ. ದಿನದಂತ್ಯಕ್ಕೆ ಶುಭ ಸುದ್ದಿ ಆಲಿಸುವಿರಿ.
 
ಕರ್ಕಟಕ: ಸಾಂಸಾರಿಕವಾಗಿ ಹೊಂದಾಣಿಕೆ ಕೊರತೆಯಿಂದ ಮನೆಯಲ್ಲಿ ಅಶಾಂತಿಯ ವಾತಾವರಣವಿರುವುದು. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯಿರುತ್ತದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
 
ಸಿಂಹ: ಅದಿಕ ಲಾಭ ಗಳಿಸುವ ವ್ಯವಹಾರಕ್ಕೆ ಕೈ ಹಾಕುವ ಮುನ್ನ ಲೆಕ್ಕ ಪತ್ರಗಳ ಬಗ್ಗೆ ಸರಿಯಾದ ಪರಿಶೋಧನೆ ನಡೆಸಿ. ವಂಚನೆಗೊಳಗಾಗುವ ಸಾಧ್ಯತೆಯಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಂತಸಕ್ಕೆ ಕಾರಣವಾಗುವುದು.
 
 
ಕನ್ಯಾ: ವೃತ್ತಿ ರಂಗದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಇರುತ್ತದೆ. ನಿಮ್ಮ ಅಜಾಗರೂಕತೆಯಿಂದ ಕೆಲವೊಂದು ತಪ್ಪುಗಳು ಇತರರಿಗೆ ತೊಂದರೆ ಉಂಟುಮಾಡಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕಾಗುವುದು. ಎಚ್ಚರಿಕೆಯಿಂದಿರಿ.
 
ತುಲಾ: ದಾಂಪತ್ಯ ಸುಖ ಸಿಗಲಿದೆ. ಕೌಟುಂಬಿಕವಾಗಿ ನೆಮ್ಮದಿಯ ದಿನಗಳಿವು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಕಠಿಣ ಪ್ರಯತ್ನ ಅಗತ್ಯ. ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಆರೋಗ್ಯದಲ್ಲಿ  ಸುಧಾರಣೆಯಾಗಲಿದೆ.
 
ವೃಶ್ಚಿಕ: ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಂಭವವಿದೆ. ಕೃಷಿ ಕ್ಷೇತ್ರದಲ್ಲಿರುವವರ ಬವಣೆಗಳು ತಪ್ಪದು. ಮನೆಯಲ್ಲಿ ಶುಭ ಕಾರ್ಯ ನಡೆಸಲು ಓಡಾಟ ನಡೆಸಬೇಕಾಗಬಹುದು. ಹಿರಿಯರ ತೀರ್ಥ ಯಾತ್ರೆಗೆ ತಯಾರಿ ನಡೆಸುವಿರಿ.
 
ಧನು: ಯಾರದ್ದೋ ಸಮಸ್ಯೆ ಬಗೆಹರಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಹೆಚ್ಚಲಿದೆ. ಋಣಾತ್ಮಕ ಚಿಂತೆಗಳಿಂದ ನೆಮ್ಮದಿಗೆ ಭಂಗ.
 
ಮಕರ: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನದಿಂದ ಉದ್ದೇಶಿತ ಕೆಲಸಗಳು ಬಾಕಿಯಾಗುವುದು. ನೂತನ ದಂಪತಿಗಳಿಗೆ ಏಕಾಂತ ಭಂಗ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗಲಿದೆ.
 
ಕುಂಭ: ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಅವಿವಾಹಿತರಿಗೆಮನಸ್ಸಿಗೆ ಒಪ್ಪಿಗೆಯಾಗುವ ಸಂಬಂಧಗಳು ಕೂಡಿಬರಲಿವೆ. ವ್ಯವಹಾರ ಸಂಬಂಧ ದೂರ ಸಂಚಾರ ಮಾಡಬೇಕಾಗುತ್ತದೆ. ಎಚ್ಚರಿಕೆಯಿಂದಿರಿ.
 
ಮೀನ: ಎಷ್ಟೋ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳನ್ನು ಪೂರ್ತಿ ಮಾಡಲು ಮುಂದಾಗುವಿರಿ. ದಾಯಾದಿಗಳ ಅಸಮಾಧಾನಕ್ಕೆ ಕಾರಣರಾಗುವಿರಿ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ ಸಿಗಲಿದೆ.
ಇದರಲ್ಲಿ ಇನ್ನಷ್ಟು ಓದಿ :