ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಆರ್ಥಿಕವಾಗಿ ಧನಾಗಮನದಿಂದ ಮನಸ್ಸಿಗೆ ಖುಷಿಯಾಗುವುದು. ಸಾಂಸಾರಿಕವಾಗಿಯೂ ಸಮಾಧಾನಕರ ವಾತಾವರಣವಿರುವುದು. ಕಿರು ಸಂಚಾರ ಮಾಡಬೇಕಾಗಿ ಬರುತ್ತದೆ. ಆದರೆ ಆರೋಗ್ಯದ ಬಗ್ಗೆ ಚಿಂತೆಯಾಗುವುದು.ವೃಷಭ: ಅನಗತ್ಯ ಅಪವಾದಗಳಿಗೆ ಗುರಿಯಾಗದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ನಯವಂಚಕರ ಬೆಣ್ಣೆಯ ಮಾತುಗಳಿಗೆ ಕರಗದಿರಿ. ಸಂಗಾತಿಯ ಸಹಕಾರ ಸಿಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ.ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಕಾಲ ಕೂಡಿಬಂದಿದೆ. ವಿದ್ಯಾರ್ಥಿಗಳಿಗೆ ಕಠಿಣ ಪ್ರಯತ್ನ ಮಾಡಿದರೇ ಯಶಸ್ಸು. ವೃತ್ತಿರಂಗದಲ್ಲಿ