ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಗುರುವಾರ, 13 ಜೂನ್ 2019 (08:50 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 


ಮೇಷ: ಕೆಲಸದಲ್ಲಿ ನಿರುತ್ಸಾಹ ತೋರಿಬಂದೀತು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದು. ಇಷ್ಟಮಿತ್ರರ ಭೇಟಿ ಸಂಭವವಿದೆ. ಕಿರು ಸಂಚಾರ ಯೋಗವಿದೆ. ದೇವತಾ ಪ್ರಾರ್ಥನೆ ಮಾಡುವಿರಿ. ಆರೋಗ್ಯದಲ್ಲಿ ಸುಧಾರಣೆ.
 
ವೃಷಭ: ನಿರೀಕ್ಷಿಸಿದ ಆದಾಯ ಕೈಗೆ ಬಂದು ಅಂದುಕೊಂಡ ಕೆಲಸಗಳನ್ನು ಸುಗಮವಾಗಿ ನೆರವೇರಿಸುವಿರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರಲಿದೆ. ಮೇಲಧಿಕಾರಿಗಳ ಪ್ರಶಂಸೆಗೊಳಗಾಗುವಿರಿ.
 
ಮಿಥುನ: ಉದಾಸೀನ ಪ್ರವೃತ್ತಿ ಬಿಟ್ಟು ಕೆಲಸದ ಕಡೆಗೆ ಗಮನಹರಿಸಿ. ನಿರುದ್ಯೋಗಿಗಳು ಪಾಲಿಗೆ ಬಂದಿದ್ದು ಪಂಚಾಮೃತ ಎಂದು ತಿಳಿದುಕೊಳ್ಳಬೇಕು. ಅಪವಾದದ ಭೀತಿಯಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಕರ್ಕಟಕ: ಧನಾಗಮನಕ್ಕೆ ನಾನಾ ಮಾರ್ಗಗಳನ್ನು ಹುಡುಕುವಿರಿ. ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದಂತಹ ಪ್ರಸ್ತಾಪಗಳು ಬರುವುದು. ಬಂಧು ವರ್ಗದವರ ಭೇಟಿ. ಗೃಹೋಪಯೋಗಿ ವಸ್ತುಗಳ ಖರೀದಿ ಸಾಧ್ಯತೆ.
 
ಸಿಂಹ: ಕೃಷಿಕರಿಗೆ ಕೊಂಚ ನಿರಾಶಾದಾಯಕ ಪರಿಸ್ಥಿತಿ ಎದುರಾಗಬಹುದು. ಆದರೆ ತಾಳ್ಮೆಗೆಡಬೇಡಿ. ದೂರ ಸಂಚಾರಗಳಿಂದ ದೇಹಾಯಾಸವಾಗುವುದು. ವಾಹನ ಸವಾರರಿಗೆ ಅಪಘಾತದ ಭಯವಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.
 
 
ಕನ್ಯಾ: ನೆರೆಹೊರೆಯವರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿರಿ. ದುಡುಕಿನ ವರ್ತನೆ ಅಪವಾದಗಳಿಗೆ ಕಾರಣವಾದೀತು. ಕಷ್ಟದ ಸಮಯದಲ್ಲಿ ಹಿರಿಯರ ಸಮಯೋಚಿತ ಸಲಹೆ ಪಾಲಿಸಿದರೆ ಒಳಿತು.
 
ತುಲಾ: ಮಕ್ಕಳ ಆರೋಗ್ಯ ಹದತಪ್ಪಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ವಿದ್ಯಾರ್ಥಿಗಳು ಶಿಕ್ಷಕ ವೃಂದದವರ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ. ಹಿತ ಶತ್ರುಗಳಿಂದ ದೂರವಿರುವುದು ಒಳ್ಳೆಯದು. ದೇವತಾ ಪ್ರಾರ್ಥನೆ ಮಾಡಿ.
 
ವೃಶ್ಚಿಕ: ಆರ್ಥಿಕವಾಗಿ ಧನಾಗಮನವಿದ್ದಷ್ಟೇ ಖರ್ಚೂ ಮಾಡುವಿರಿ. ಸಂಗಾತಿಯ ಅಲಂಕಾರಿಕ ವಸ್ತುಗಳಿಗಾಗಿ ಧನವಿನಿಯೋಗ ಮಾಡುವಿರಿ. ಅಧಿಕಾರಿ ವರ್ಗದವರಿಂದ ಕಿರಿ ಕಿರಿಯಿದ್ದರೂ ನಿಮ್ಮ ಕೆಲಸಕ್ಕೆ ತೊಂದರೆಯಾಗದು.
 
ಧನು: ಮಕ್ಕಳ ವಿಚಾರದಲ್ಲಿ ಸಂತಸದ ವಿಚಾರವೊಂದನ್ನು ಕೇಳಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿಕೊಳ್ಳಲೇಬೇಕಾದ ಸಮಯವಿದು. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಕಡಿವಾಣವಿರಲಿ.
 
ಮಕರ: ಹಣಕಾಸಿನ ಮುಗ್ಗಟ್ಟಿನಿಂದ ಅಂದುಕೊಂಡ ಕೆಲಸಗಳು ಅರ್ಧಕ್ಕೆ ನಿಲ್ಲುವುದು. ದುಡಿಮೆಗೆ ತಕ್ಕ ಪ್ರತಿಫಲ ಸಿಗದೇ ಚಿಂತೆಯಾಗುವುದು. ಕುಲದೇವರ ಪ್ರಾರ್ಥನೆ ಮಾಡಿದರೆ ಒಳಿತು. ನಿಧಾನವಾಗಿ ಅಭಿವೃದ್ಧಿ ಕಾಣುವಿರಿ.
 
ಕುಂಭ: ಕುಟುಂಬದವರ ಸಹಕಾರವಿರುವುದರಿಂದ ಎಂತಹದ್ದೇ ಕಷ್ಟವಿದ್ದರೂ ಜಯಗಳಿಸುವಿರಿ. ಆದರೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಲಸ್ಯತನ ಕಂಡುಬರಬಹುದು. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ.
 
ಮೀನ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದಲೇ ಮೋಸ ಹೋಗುವಿರಿ. ಲೆಕ್ಕ ಪತ್ರಗಳ ಬಗ್ಗೆ ಜಾಗ್ರತೆ ಅಗತ್ಯ. ದಾಂಪತ್ಯದಲ್ಲಿ ಹೊಂದಾಣಿಕೆ ಕೊರತೆ ಕಂಡುಬರಲಿದೆ. ಆರ್ಥಿಕವಾಗಿ ಸಮಾಧಾನಕರ ದಿನ. ದೇವರ ಪ್ರಾರ್ಥನೆ ಮಾಡಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?

ಬೆಂಗಳೂರು: ಒಟ್ಟು 27 ನಕ್ಷತ್ರಗಳಿದ್ದು, ಪ್ರತಿಯೊಂದು ನಕ್ಷತ್ರಕ್ಕೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?

ಬೆಂಗಳೂರು: ಒಟ್ಟು 27 ನಕ್ಷತ್ರಗಳಿದ್ದು, ಪ್ರತಿಯೊಂದು ನಕ್ಷತ್ರಕ್ಕೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.