ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶನಿವಾರ, 15 ಜೂನ್ 2019 (08:46 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ನಿಮ್ಮ ಪರೋಪಕಾರಿ, ಉದಾರಿ ಮನೋಭಾವದಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಆರ್ಥಿಕವ ವ್ಯವಹಾರದಲ್ಲಿ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ.
 
ವೃಷಭ: ಸಾಂಸಾರಿಕವಾಗಿ ಶಾಂತ ಪರಿಸ್ಥಿತಿಯಿರುತ್ತದೆ. ಸಂಗಾತಿಯಿಂದ ಸೂಕ್ತ ಸಲಹೆಗಳು ಸಿಗುವುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಆದರೆ ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಕಿರುಕುಳ ಎದುರಿಸಬೇಕಾದೀತು.
 
ಮಿಥುನ: ಹಣಕಾಸಿನ ಅಡಚಣೆಗಳು ಎದುರಾಗಲಿದ್ದು, ಕೆಲಸ ಕಾರ್ಯಗಳಲ್ಲಿ ವಿಳಂಬ ಗತಿ ತೋರಿಬರಲಿದೆ. ವಾಹನ ಚಲಾಯಿಸುವಾಗ ಅಪಘಾತದ ಭಯವಿದೆ. ವ್ಯಾಪಾರಿಗಳಿಗೆ ಕೊಂಚ ನಷ್ಟದ ಭೀತಿಯೂ ಇದೆ. ಎಚ್ಚರಿಕೆ ಅಗತ್ಯ.
 
ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಓಡಾಟದಿಂದ ದೇಹಾಯಾಸವಾಗುವುದು. ಆದರೆ ದೈವಾನುಕೂಲದಿಂದ ಹಣಕಾಸಿನ ಮುಗ್ಗಟ್ಟುಗಳು ದೂರವಾಗಲಿದ್ದು, ಅಂದುಕೊಂಡ ಕಾರ್ಯಗಳನ್ನು ನೆರವೇರಿಸುತ್ತೀರಿ.
 
ಸಿಂಹ: ಸಾಮಾಜಿಕವಾಗಿ ಜವಾಬ್ಧಾರಿಗಳು ಇದ್ದರೂ ನಿಮ್ಮ ಸ್ಥಾನ ಮಾನ ಹೆಚ್ಚುವುದು. ಒಂದು ರೀತಿಯಲ್ಲಿ ರಾಜಯೋಗ ಇಂದು ನಿಮ್ಮದಾಗಲಿದೆ. ಕುಟುಂಬದವರೂ ನಿಮ್ಮ ಮಾತಿಗೆ ಬೆಲೆಕೊಡುವರು.
 
 
ಕನ್ಯಾ: ವೃತ್ತಿ ಜೀವನದಲ್ಲಿ ಕಿರಿ ಕಿರಿ ಮನಸ್ಸಿನ ನೆಮ್ಮದಿ ಹಾಳು ಮಾಡಲಿದೆ. ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸುವಿರಿ. ಖರ್ಚು ವೆಚ್ಚಗಳು ಅಧಿಕವಾಗಲಿದೆ. ಆದರೆ ಸಂಗಾತಿಯ ಪ್ರೀತಿಗೆ ಪಾತ್ರರಾಗಲಿದ್ದೀರಿ.
 
ತುಲಾ: ಆರ್ಥಿಕವಾಗಿ ನಿವ್ವಳ ಲಾಭ, ಪ್ರಗತಿ ಕಂಡುಬರಲಿದೆ. ಸಂಗಾತಿಗಾಗಿ ಚಿನ್ನಾಭರಣ ಖರೀದಿ ಮಾಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯಿರುವುದು. ಆದರೆ ಆರೋಗ್ಯ ಹದಗೆಡುವ ಸಂಭವವಿದ್ದು, ಎಚ್ಚರಿಕೆ ಅಗತ್ಯ.
 
ವೃಶ್ಚಿಕ: ದುಡುಕಿನ ವರ್ತನೆ, ಮಾತಿನಿಂದ ಸಂಬಂಧ ಹಾಳುಮಾಡಿಕೊಳ್ಳಬೇಡಿ. ಅವಿವಾಹಿತರಿಗೆ ಉತ್ತಮ ಸಂಬಂಧಕ್ಕಾಗಿ ಕೆಲವು ದಿನ ಕಾಯಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಬಂದ ಅವಕಾಶವನ್ನು ಬಳಸಿಕೊಳ್ಳುವುದು ಒಳ್ಳೆಯದು.
 
ಧನು: ಮಾತಿನಿಂದ ಮನೆ, ಮನ ಕೆಡದಂತೆ ಎಚ್ಚರಿಕೆ ವಹಿಸುವ ಜವಾಬ್ಧಾರಿ ನಿಮ್ಮದಾಗಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು.
 
ಮಕರ: ನಾನಾ ಮಾರ್ಗಗಳಿಂದ ಧನ ಸಂಪಾದನೆ ಮಾಡಲಿದ್ದೀರಿ. ಬಾಕಿ ಹಣಗಳು ಪಾವತಿಯಾಗುವುದು. ವಾಹನ ಖರೀದಿಗೆ ಮುಂದಾಗುವಿರಿ. ನೂತನ ದಂಪತಿಗಳಿಗೆ ಸಂತಾನ ಫಲದ ಸೂಚನೆ ಸಿಗಲಿದೆ.
 
ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ತಪ್ಪದು. ತಾಳ್ಮೆಯೇ ನಿಮ್ಮ ಅಸ್ತ್ರವಾಗಬೇಕು. ಉದ್ದೇಶಿತ ಕಾರ್ಯದಲ್ಲಿ ವಿಳಂಬಗತಿ ತೋರಿಬರುವುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಮೀನ: ವ್ಯಾಪಾರಿಗಳು ವ್ಯವಹಾರದಲ್ಲಿ ನಷ್ಟವಾಗದಂತೆ ಎಚ್ಚರಿಕೆ ವಹಿಸಬೇಕು. ಋಣಾತ್ಮಕ ಚಿಂತನೆಗೆ ಅವಕಾಶ ಮಾಡಿಕೊಡದಿರಿ. ಕಷ್ಟದ ಸಮಯದಲ್ಲಿ ಮಹಿಳೆಯರಿಂದ ಸಹಾಯ ಸಿಗುವುದು. ಸಂಚಾರದಿಂದ ಕಾರ್ಯ ಸಿದ್ಧಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?

ಬೆಂಗಳೂರು: ಒಟ್ಟು 27 ನಕ್ಷತ್ರಗಳಿದ್ದು, ಪ್ರತಿಯೊಂದು ನಕ್ಷತ್ರಕ್ಕೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?

ಬೆಂಗಳೂರು: ಒಟ್ಟು 27 ನಕ್ಷತ್ರಗಳಿದ್ದು, ಪ್ರತಿಯೊಂದು ನಕ್ಷತ್ರಕ್ಕೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.