Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 29 ಜೂನ್ 2019 (08:52 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ನೀವು ಮನಸ್ಸಿನಲ್ಲಿ ಅಂದುಕೊಂಡ ಕೆಲಸ ನೆರವೇರಲಿದೆ. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ದೊರಕಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.
 
ವೃಷಭ: ಗೃಹ ನಿರ್ಮಾಣ ಕಾರ್ಯಗಳಿಗೆ ಕೈ ಹಾಕಲು ಇದು ಸಕಾಲ. ಋಣಾತ್ಮಕ ಚಿಂತನೆಗಳಿಗೆ ಅವಕಾಶ ಮಾಡಿಕೊಡದಿರಿ. ವಾಗ್ವಾದಗಳನ್ನು ಪರಿಹರಿಸಲು ವಿಶಾಲ ಮನೋಭಾವ ಬೇಕು. ದಿನದಂತ್ಯಕ್ಕೆ ಶುಭ ಸುದ್ದಿ.
 
ಮಿಥುನ: ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ವಾಗ್ವಾದಗಳು ಎದುರಾಗುವುದು. ಇದರಿಂದ ಮಾನಸಿಕ ನೆಮ್ಮದಿಗೆ ಭಂಗ. ಸಾಲ ಮಾಡಲು ಹೋಗಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ.
 
ಕರ್ಕಟಕ: ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುವುದು. ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ ಸಂಭವವಿದೆ. ಮನೆ ಬದಲಾವಣೆಗೆ ಚಿಂತನೆ ನಡೆಸುವಿರಿ. ಸರಕಾರಿ ಕಚೇರಿಗೆ ಓಡಾಟ ನಡೆಸಬೇಕಾಗುತ್ತದೆ.
 
ಸಿಂಹ: ಹಿರಿಯರೊಂದಿಗೆ ಆದಷ್ಟು ವಾದ ವಿವಾದಗಳಾಗದಂತೆ ಎಚ್ಚರಿಕೆ ವಹಿಸಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ನಿಮ್ಮ ಏಳಿಗೆ ಕಂಡು ಅಸೂಯೆಪಡುವರು. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ.
 
 
ಕನ್ಯಾ: ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗಿ ಬರುತ್ತದೆ. ವೃತ್ತಿರಂಗದಲ್ಲಿ ಕಾರ್ಯದೊತ್ತಡದಿಂದ ದೇಹ ಹೈರಾಣಾಗಲಿದೆ. ವ್ಯಾಪಾರ, ವ್ಯವಹಾರ ಮಾಡುವರಿಗೆ ಮುನ್ನಡೆಯಾಗಲಿದೆ.
 
ತುಲಾ: ಉದ್ಯೋಗ ಅರಸಿಕೊಂಡು ದೂರ ಸಂಚಾರ ಮಾಡುವಿರಿ. ದೈಹಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಏರ್ಪಾಟು ಮಾಡುವಿರಿ. ದಿನದಂತ್ಯಕ್ಕೆ ಶುಭ ಸುದ್ದಿ.
 
ವೃಶ್ಚಿಕ: ತಾಳ್ಮೆ ಸಮಾಧಾನದಿಂದ ಮುನ್ನಡೆದರೆ ಇಂದು ನೀವು ಕೈ ಹಿಡಿದ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಸಾಲಗಳು ಮರುಪಾವತಿಯಾಗಲಿವೆ. ದೇವತಾ ಪ್ರಾರ್ಥನೆ ಮಾಡಿ.
 
ಧನು: ಕಠಿಣ ಪರಿಶ್ರಮ ಪಟ್ಟರೆ ತಕ್ಕ ಫಲ ಸಿಗುವುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ತಲೆದೋರಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಲಸ್ಯ ಕಂಡುಬಂದೀತು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.
 
ಮಕರ: ದೈವಾನುಕೂಲದಿಂದ ಇಂದು ನೀವು ಕೈ ಹಿಡಿದ ಕೆಲಸಗಳು ಯಶಸ್ವಿಯಾಗಲಿದೆ. ಆರ್ಥಿಕವಾಗಿ ಹಂತ ಹಂತವಾಗಿ ಅಭಿವೃದ್ಧಿ ಕಾಣುವಿರಿ. ಉದ್ಯೋಗಿಗಳಿಗೆ ಬಡ್ತಿ ಯೋಗವಿದೆ. ಸಂಗಾತಿಯೊಂದಿಗೆ ಸುಮಧುರ ಕ್ಷಣ ಕಳೆಯುವಿರಿ.
 
ಕುಂಭ: ಸಂಗಾತಿಯೊಂದಿಗೆ ಅಸಮಾಧಾನವಾಗಲಿದೆ. ದುಡುಕಿನ ಮಾತಿನಿಂದ ಕೆಲಸ ಕೆಟ್ಟೀತು. ಅನಗತ್ಯ ವಾದ ವಿವಾದಗಳಿಂದ ದೂರವಿರುವುದೇ ಒಳ್ಳೆಯದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಮೀನ: ವಿಘ್ನಗಳು ತೋರಿಬಂದರೂ ನಿಮ್ಮ ಯಶಸ್ಸನ್ನು ಯಾರೂ ತಡೆಹಿಡಿಯಲಾಗದು. ಮಹಿಳೆಯರಿಂದ ಸಹಕಾರ ದೊರೆಯಲಿದೆ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ಅನಗತ್ಯ ಖರ್ಚು  ಬೇಡ.
ಇದರಲ್ಲಿ ಇನ್ನಷ್ಟು ಓದಿ :