ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶುಕ್ರವಾರ, 19 ಜುಲೈ 2019 (08:45 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 


ಮೇಷ: ವೃತ್ತಿ ರಂಗದಲ್ಲಿ ಎಚ್ಚರಿಕೆಯಿಂದ ಕಾರ್ಯ ನಿಭಾಯಿಸಬೇಕು. ಆದಾಯಕ್ಕೆ ಕೊರತೆಯಾಗದು. ಆದರೆ ಖರ್ಚು ವೆಚ್ಚಗಳ ಬಗ್ಗೆ ನಿಗಾ ಅಗತ್ಯ. ರಾಜಕೀಯ ರಂಗದಲ್ಲಿ ಹಿಡಿತ ಸಾಧಿಸುವಿರಿ. ದಿನದಂತ್ಯಕ್ಕೆ ಶುಭ ಸುದ್ದಿ.
 
ವೃಷಭ: ಮನೆಗೆ ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಸಂತಸದ ವಾತಾವರಣವಿರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಅನಿರೀಕ್ಷಿತವಾಗಿ ಕೆಲವು ಖರ್ಚು ವೆಚ್ಚಗಳಾಗಬಹುದು.
 
ಮಿಥುನ: ಆರೋಗ್ಯ ಹದತಪ್ಪಬಹುದು, ಎಚ್ಚರಿಕೆ ಅಗತ್ಯ. ಅವಿವಾಹಿತರ  ವಿವಾಹ ಪ್ರಯತ್ನಕ್ಕೆ ಅಡ್ಡಿ ಆತಂಕಗಳು ಎದುರಾಗಬಹುದು. ತಾತ್ಕಾಲಿಕ ಉದ್ಯೋಗದವರಿಗೆ ಮುನ್ನಡೆ ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ.
 
ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ತಾಳ್ಮೆ ಸಮಾಧಾನದಿಂದ ಮುನ್ನಡೆಯುವುದು ಅಗತ್ಯ. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ. ಆರೋಗ್ಯದಲ್ಲು ಸುಧಾರಣೆಯಾಗುವುದು.
 
ಸಿಂಹ: ವೃತ್ತಿರಂಗದಲ್ಲಿ ನೀವು ಎಷ್ಟೇ ಉತ್ತಮ ಕೆಲಸ ಮಾಡಿದರೂ ಮೇಲಧಿಕಾರಿಗಳ ಕಿರಿ ಕಿರಿ ತಪ್ಪದು. ತಾಳ್ಮೆಯಿಂದಿರಿ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಾಗದು. ದೂರ ಸಂಚಾರದಿಂದ ಕಾರ್ಯ ಸಿದ್ಧಿಯಾಗಲಿದೆ.
 
 
ಕನ್ಯಾ: ನಿಮ್ಮ ಧೈರ್ಯೋತ್ಸಾಹದಿಂದ ಕೈ ಹಿಡಿದ ಕೆಲಸದಲ್ಲಿ ಜಯ ಗಳಿಸುವಿರಿ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಮನಸ್ತಾಪವಾಗುವ ಸಾಧ್ಯತೆಯಿದೆ. ಸಾಲ ಪಾವತಿಗೆ ಹೊಸ ದಾರಿ ಹುಡುಕುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ ಸಿಗುವುದು.
 
ತುಲಾ: ಆರ್ಥಿಕವಾಗಿ ಹಂತ ಹಂತವಾಗಿ ಚೇತರಿಕೆ ಕಂಡುಬರಲಿದೆ, ಇದರಿಂದ ಅಂದುಕೊಂಡ ಕಾರ್ಯಗಳನ್ನು ನೆರವೇರಿಸುವಿರಿ. ಹಿರಿಯರ ಸಮಯೋಚಿತ ಸಲಹೆ ಉಪಯೋಗಕ್ಕೆ ಬರುವುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ವೃಶ್ಚಿಕ: ಸಂಚಾರದಲ್ಲಿ ಅಡೆತಡೆಗಳು ತೋರಿಬರಲಿವೆ. ವಾಹನ ಚಾಲಕರು ಎಚ್ಚರಿಕೆ ವಹಿಸಬೇಕು. ಆರೋಗ್ಯದ ಬಗ್ಗೆಯೂ ಕಾಳಜಿವಹಿಸಬೇಕಾಗುತ್ತದೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆಯಿದೆ.
 
ಧನು: ಕ್ರಿಯಾಶೀಲರಾಗಿರುವಿರಿ. ಅಧಿಕ ಓಡಾಟದಿಂದ ದೇಹಾಯಾಸವಾದೀತಾದರೂ, ನೀವು ಅಂದುಕೊಂಡ ಕಾರ್ಯ ಸಾಧಿಸುವಿರಿ. ಸಂಗಾತಿಗೆ ಸೂಕ್ತ ಸಮಯದಲ್ಲಿ ಸಲಹೆ ಕೊಡುವಿರಿ. ದೇವತಾ ಪ್ರಾರ್ಥನೆ ಮಾಡಿ.
 
ಮಕರ: ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿರುವವರಿಗೆ ಅಭಿವೃದ್ಧಿಗೆ ಪೂರಕವಾದ ಬೆಳವಣಿಗೆಗಾಳಗಲಿವೆ. ಇದುವರೆಗೆ ಕಾರ್ಯಕ್ಷೇತ್ರದಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗುವುದು. ಕುಲದೇವರ ದರ್ಶನ ಪಡೆಯುವಿರಿ.
 
ಕುಂಭ: ಸಾಂಸಾರಿಕವಾಗಿ  ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ವೃತ್ತಿರಂಗದಲ್ಲಿ ಕಾರ್ಯದೊತ್ತಡಗಳು ಅಧಿಕವಾಗಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮ ಪಡದೇ ಫಲ ಸಿಗದು.
 
ಮೀನ: ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಇಷ್ಟು ದಿನ ಇದ್ದ ಮನಸ್ತಾಪಗಳು ದೂರವಾಗುವುದು. ಆರ್ಥಿಕವಾಗಿಯೂ ಲಾಭ ಗಳಿಸುವಿರಿ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಶ್ರವಣ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

news

ಉತ್ತರಾಷಾಢ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.