ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಶನಿವಾರ, 20 ಜುಲೈ 2019 (08:55 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 


ಮೇಷ: ಪ್ರಯತ್ನ ಬಲವಿದ್ದರೆ ಮಾತ್ರ ಕಾರ್ಯ ಸಾಧನೆಯಾಗಲಿದೆ. ದೈನಂದಿನ ಕೆಲಸದಲ್ಲಿ ಬಿಡುವೇ ಇಲ್ಲದಂತಾದೀತು. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಸಾಂಸಾರಿಕವಾಗಿ ಬಂಧು ಮಿತ್ರರಿಂದ ಸಹಾಯ ಸಿಗಲಿದೆ.
 
ವೃಷಭ: ಋಣಾತ್ಮಕ ಚಿಂತೆಗಳಿಂದ ಕೈಹಿಡಿದ ಕೆಲಸಗಳಿಗೆ ತೊಂದರೆಯಾದೀತು. ಸಂತಾನಾಪೇಕ್ಷಿತ ದಂಪತಿಗಳಿಗೆ ಸಂತಾನ ಫಲ ಸೂಚನೆ ಸಿಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.
 
ಮಿಥುನ: ಆರೋಗ್ಯ ಹದತಪ್ಪಬಹುದು, ಎಚ್ಚರಿಕೆ ಅಗತ್ಯ. ಅವಿವಾಹಿತರ  ವಿವಾಹ ಪ್ರಯತ್ನಕ್ಕೆ ಅಡ್ಡಿ ಆತಂಕಗಳು ಎದುರಾಗಬಹುದು. ತಾತ್ಕಾಲಿಕ ಉದ್ಯೋಗದವರಿಗೆ ಮುನ್ನಡೆ ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ.
 
ಕರ್ಕಟಕ: ಗುರುಬಲದಿಂದ ನೀವು ಕೈ ಹಿಡಿದ ಕಾರ್ಯಗಳಲ್ಲಿ ಜಯ, ಲಾಭ ಗಳಿಸುವಿರಿ. ಸಂಗಾತಿಯ ಜತೆಗೆ ಸುಮಧುರ ಕ್ಷಣ ಕಳೆಯುವಿರಿ. ಮಕ್ಕಳ ಅಭಿಪ್ರಾಯಕ್ಕೆ ಬೆಲೆಕೊಡಬೇಕಾಗುತ್ತದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ನಡೆಸಬೇಕು.
 
ಸಿಂಹ: ದೇಹಾರೋಗ್ಯ ಹದತಪ್ಪಬಹುದು, ಕಾಳಜಿ ಅಗತ್ಯ. ಸರಕಾರಿ ಉದ್ಯೋಗದಲ್ಲಿರುವವರಿಗೆ ಬಡ್ತಿ, ಮುನ್ನಡೆ ಯೋಗವಿದೆ. ಅನಿರೀಕ್ಷಿತವಾಗಿ ಆರ್ಥಿಕ ಲಾಭವಾಗಲಿದೆ. ಬಂಧು ಮಿತ್ರರ ಭೇಟಿ ಮನಸ್ಸಿಗೆ ಖುಷಿಕೊಡುವುದು.
 
ಕನ್ಯಾ: ಹಿರಿಯ ಸಲಹೆಗಳಿಗೆ ಬೆಲೆಕೊಡಬೇಕಾಗುತ್ತದೆ. ಕಾರ್ಯವಾಸಿ ಕತ್ತೆ ಕಾಲು ಹಿಡಿ ಅಂತಾರಲ್ಲ. ಹಾಗೆ ನಿಮ್ಮ ಕೆಲಸ ಪೂರ್ತಿ ಮಾಡಲು ಕೆಳವರ್ಗದ ನೌಕರರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ದಿನದಂತ್ಯಕ್ಕೆ ಶುಭ.
 
ತುಲಾ: ಅನವಶ್ಯಕವಾಗಿ ಮಾನಸಿಕ ಉದ್ವೇಗಕ್ಕೊಳಗಾಗಿ ತಪ್ಪು ಹೆಜ್ಜೆಯಿಡುವ ಸಂಭವವಿದೆ. ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಂದಾಣಿಕೆಯಿರಲಿ.
 
ವೃಶ್ಚಿಕ: ಆರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆದರೂ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶ ಪಡೆಯುವರು. ವಿವಾಹ ಸಂಬಂಧ ಮಾತುಕತೆಗಳಿಗೆ ಚಾಲನೆ ದೊರೆಯಲಿದೆ.
 
ಧನು: ಹಿತಶತ್ರುಗಳು ಮಾಡುವ ಎಡವಟ್ಟಿನಿಂದ ನಿಮ್ಮ ಕೆಲಸದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಅಚ್ಚರಿಯ ರೀತಿಯಲ್ಲಿ ಕಾರ್ಯಸಾಧನೆಯಾಗಲಿದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಾಗುವ ಸಾಧ್ಯತೆಯಿದೆ.
 
ಮಕರ: ದೈವಾನುಗ್ರಹದಿಂದ ಮನೋಕಾಮನೆಗಳು ನೆರವೇರಲಿದೆ. ವ್ಯಾಪಾರ, ವ್ಯವಹಾರದಲ್ಲಿ ನಿವ್ವಳ ಲಾಭ ಗಳಿಸುವಿರಿ. ಆದರೆ ಸಂಬಂಧಗಳು ಹದಗೆಡುವ ಸಾಧ್ಯತೆಯಿದ್ದು, ಮಾತಿನ ಮೇಲೆ ನಿಗಾ ಇರಲಿ. ಕಿರು ಸಂಚಾರ ಯೋಗವಿದೆ.
 
ಕುಂಭ: ಉದ್ಯೋಗಸ್ಥ ಮಹಿಳೆಯರು ಶುಭ ಫಲ ಅನುಭವಿಸುವರು. ಸಾಮಾಜಿಕವಾಗಿ ಉತ್ತಮ ಸ್ಥಾನ ಮಾನ ನಿಮ್ಮದಾಗುವುದು. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯಾದೀತು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ಮೀನ: ಯಾವುದೇ ಕೆಲಸ ಮಾಡಲು ಹೊರಟರೂ ಅಡ್ಡಿ ಆತಂಕಗಳು ಎದುರಾಗಿ ನಿಮ್ಮನ್ನು ನಿರಾಶೆಗೆ ನೂಕಲಿದೆ. ಆದರೆ ತಾಳ್ಮೆ ಕಳೆದುಕೊಳ್ಳಬೇಡಿ. ಸಂಗಾತಿಯ ಅಭೀಷ್ಟೆಗಳನ್ನು ನೆರವೇರಿಸಬೇಕಾಗುತ್ತದೆ. ದಿನದಂತ್ಯಕ್ಕೆ ಶುಭ ಸುದ್ದಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಧನಿಷ್ಠ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಶ್ರವಣ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.