ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಭಾನುವಾರ, 21 ಜುಲೈ 2019 (08:40 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ವಿದ್ಯಾರ್ಥಿ ವರ್ಗದವರಿಗೆ ಕಠಿಣ ಪರಿಶ್ರಮ ಪಡಬೇಕಿದೆ. ಗೃಹ ಕೆಲಸಗಳಲ್ಲಿ ಹೆಚ್ಚಿನ ಓಡಾಟ ನಡೆಸಬೇಕಾಗುತ್ತದೆ. ಆರೋಗ್ಯದ ಚಿಂತೆ ಕಾಡುವುದು. ಹಾಗಂತ ಋಣಾತ್ಮಕ ಚಿಂತನೆಗಳಿಂದ ಮನಸ್ಸಿಗೆ ಬೇಸರ ಮಾಡಿಕೊಳ್ಳಬೇಡಿ.
 
ವೃಷಭ: ಚಿಂತೆಗಳಿಂದಾಗಿ ಕಾರ್ಯ ಸಾಧನೆಗೆ ತೊಂದರೆಯಾಗುವುದು. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ರಾಜಕೀಯ ವರ್ಗದವರಿಗೆ ಮುನ್ನಡೆಯ ಭಾಗ್ಯವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ಮಿಥುನ: ಯಾವುದೇ ವಿಚಾರದಲ್ಲೂ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ತೊಂದರೆ ಎದುರಾಗುವುದು. ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ದೂರ ಸಂಚಾರ ಕೈಗೊಳ್ಳಬೇಕಾಗುತ್ತದೆ.
 
ಕರ್ಕಟಕ: ದೇಹಾರೋಗ್ಯ ಕೈಕೊಡುವುದು. ಅನಿರೀಕ್ಷಿತವಾಗಿ ಖರ್ಚುಗಳು ಎದುರಾಗಲಿವೆ. ಅವಿವಾಹಿತರಿಗೆ ಅನಿರೀಕ್ಷಿತವಾಗಿ ಕಂಕಣ ಬಲ ಕೂಡಿಬರುವುದು. ವಾಹನ ಖರೀದಿ ಯೋಗವಿದೆ.
 
ಸಿಂಹ: ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಲಾಭವಾಗಲಿದೆ. ದೇಹಾರೋಗ್ಯದ ಕಡೆಗೆ ಗಮನಹರಿಸಬೇಕಾಗುತ್ತದೆ.
 
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಮುನ್ನಡೆಯಿದ್ದರೂ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆ ಕೊರತೆಯಾಗಬಹುದು. ಮಕ್ಕಳ ಭವಿಷ್ಯದ ಯೋಜನೆ ರೂಪಿಸುವಿರಿ.
 
ತುಲಾ: ವ್ಯಾಪಾರ, ವ್ಯವಹಾರಗಳಿಂದ ಲಾಭ ಗಳಿಸುವಿರಿ. ಹಿರಿಯರ ತೀರ್ಥ ಯಾತ್ರೆಗೆ ಏರ್ಪಾಡು ಮಾಡುವಿರಿ. ಕಳೆದು ಹೋದ ಸಂಬಂಧಗಳು ಮತ್ತೆ ಬೆಸೆಯಲಿವೆ. ಹಿತಶತ್ರುಗಳಿಂದ ದೂರವಿರುವುದೇ ಉತ್ತಮ.
 
ವೃಶ್ಚಿಕ: ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು. ಪ್ರೀತಿ ಪಾತ್ರರಿಗಾಗಿ ಸಮಯ ಮೀಸಲಿಡಲಿದ್ದೀರಿ. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಎಚ್ಚರಿಕೆಯಿಂದಿರಿ.
 
ಧನು: ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಗಮನಕೊಡಬೇಕಾಗುತ್ತದೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ. ರಾಜಕೀಯವಾಗಿ ಮುನ್ನಡೆಯಿರುತ್ತದೆ. ಆದರೆ ಚಾಡಿ ಮಾತುಗಳಿಗೆ ಕಿವಿಗೊಡಬೇಡಿ.
 
ಮಕರ: ಅರ್ಧಕ್ಕೆ ನಿಂತ ಕೆಲಸಗಳಿಗೆ ಚಾಲನೆ ದೊರೆಯಲಿದೆ. ಅವಿವಾಹಿತರಿಗೆ ವಿವಾಹಕ್ಕೆ ಪ್ರಯತ್ನ ಪಡಬೇಕಾಗುತ್ತದೆ. ಆಸ್ತಿ ವಿವಾದಗಳು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಯುವುದು. ದೇವರ ದರ್ಶನ ಮಾಡುವಿರಿ.
 
ಕುಂಭ: ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಕೃಷಿ ಕ್ಷೇತ್ರದಲ್ಲಿರುವವರಿಗೆ ಸಂತಸದ ವಾರ್ತೆಯಿದೆ. ಸ್ವ ಉದ್ಯೋಗಿಗಳು ಲಾಭ ಗಳಿಸುವರು. ಹಿರಿಯರೊಂದಿಗೆ ಮಾತನಾಡುವಾಗ ದುಡುಕಬೇಡಿ.
 
ಮೀನ: ಹಲವು ದಿನಗಳಿಂದ ಕಂಡಿದ್ದ ಕನಸುಗಳನ್ನು ನನಸು ಮಾಡಿಕೊಳ್ಳುವಿರಿ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಗಮನಕೊಡಬೇಕಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುವುದು.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಶತಭಿಷಾ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಧನಿಷ್ಠ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.