ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಮಂಗಳವಾರ, 23 ಜುಲೈ 2019 (08:53 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಸಾಂಸಾರಿಕವಾಗಿ ಸಮಾಧಾನಕರ ದಿನವಾಗಿರಲಿದೆ. ಆದರೆ ಸಂಗಾತಿಯ ಕೆಲವೊಂದು ನಿರ್ಧಾರಗಳು ಅಸಮಾಧಾನಕ್ಕೆ ಕಾರಣವಾಗಬಹುದು. ಆತ್ಮೀಯರ ಜತೆ ಉತ್ತಮ ಸಮಯ ಕಳೆಯುವಿರಿ.
 
ವೃಷಭ: ವಿನಾಕಾರಣ ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸಲು ಹೋದರೆ ತೊಂದರೆಗೆ ಸಿಲುಕಿಕೊಳ್ಳಬೇಕಾದೀತು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡವಿರಲಿದೆ.
 
ಮಿಥುನ: ವ್ಯಾಪಾರ, ವ್ಯವಹಾರದಲ್ಲಿ ಹಿನ್ನಡೆ ಅನುಭವಿಸಬೇಕಾದೀತು. ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣವಿರಲಿದೆ. ಆರೋಗ್ಯದಲ್ಲಿ ಕಾಳಜಿಯಿರಬೇಕು. ತಾಳ್ಮೆ, ಸಮಾಧಾನದಿಂದ ಮುಂದುವರಿಯಿರಿ.
 
ಕರ್ಕಟಕ: ನೀವು ಇಂದು ಕೈ ಹಿಡಿದ ಕಾರ್ಯಗಳಲ್ಲಿ ಜಯ ಗಳಿಸುವಿರಿ. ಸಹೋದ್ಯೋಗಿಗಳು ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರುವರು. ಅನವಶ್ಯಕವಾಗಿ ಕಲಹಕ್ಕೆ ಕಾರಣರಾಗಬೇಡಿ. ಎಚ್ಚರಿಕೆಯಿಂದಿರಿ.
 
ಸಿಂಹ: ಸಮಾಧಾನ ಚಿತ್ತದಿಂದ ಎಲ್ಲವನ್ನೂ ಎದುರಿಸಿ ಮುನ್ನಡೆಯಬೇಕು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆಕಸ್ಮಿಕ ಧನ ಲಾಭವಾಗಲಿದೆ. ಕೆಳ ಹಂತದ ನೌಕರರಿಗೆ ಮುನ್ನಡೆ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.
 
ಕನ್ಯಾ: ಕಾರ್ಯಕ್ಷೇತ್ರದಲ್ಲಿ ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು. ಎಷ್ಟೇ ಉತ್ತಮ ಕೆಲಸ ಮಾಡಿದರೂ ಅದಕ್ಕೆ ತಕ್ಕ ಫಲ ಸಿಗದೇ ನಿರಾಶೆಯಾಗಬಹುದು. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ.
 
ತುಲಾ: ವಿವಾಹ ಬೇಡವೆಂದು ಕೂತಿದ್ದವರಿಗೆ ಅನಿರೀಕ್ಷಿತವಾಗಿ ಕಂಕಣ ಬಲ ಕೂಡಿಬರಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಸಕಾಲ. ಸಂತಾನ ಹೀನ ದಂಪತಿಗಳಿಗೆ ಶುಭ ಫಲಗಳಿವೆ.
 
ವೃಶ್ಚಿಕ: ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ ಧನ ವ್ಯಯ ಮಾಡುವಿರಿ. ಆದರೆ ಖರ್ಚು ವೆಚ್ಚದ ಬಗ್ಗೆ ಹಿಡಿತ ಅಗತ್ಯ. ಆಪ್ತರನ್ನೇ ಸಂಶಯಿಸುವ ಪರಿಸ್ಥಿತಿ ಎದುರಾಗಲಿದೆ. ದೂರ ಸಂಚಾರದಲ್ಲಿ ಎಚ್ಚರ ಅಗತ್ಯ.
 
ಧನು: ಸಾಮಾಜಿಕವಾಗಿ ಉತ್ತಮ ಸ್ಥಾನ ಮಾನ ನಿಮ್ಮದಾಗುವುದು. ಹಠಮಾಡಿ ಧೋರಣೆ ಬಿಡಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗದೇ ಬೇಸರವಾಗಬಹುದು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯಾಗಬಹುದು.
 
ಮಕರ: ಉದ್ಯಮ ಕ್ಷೇತ್ರದಲ್ಲಿರುವವರಿಗೆ ಆದಾಯ ಗಳಿಕೆ ಹೆಚ್ಚುವುದು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವಿರಿ. ಔದ್ಯೋಗಿಕವಾಗಿ ಉನ್ನತಿ ಕಾಣುವಿರಿ. ಸಂಗಾತಿಯ ಸಹಕಾರವಿರಲಿದೆ. ದೇವರ ಪ್ರಾರ್ಥನೆ ಮಾಡಿ.
 
ಕುಂಭ: ಸಾಂಸಾರಿಕವಾಗಿ ನಿರ್ಧಾರ ತೆಗೆದುಕೊಳ್ಳುವಾಗ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುವಿರಿ. ಮಕ್ಕಳಿಂದ ಬೇಸರವಾಗಬಹುದು. ಕಷ್ಟಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.
 
ಮೀನ: ನಿರುದ್ಯೋಗಿಗಳಿಗೆ ಎಷ್ಟೋ ಕಾಲದಿಂದ ಬಯಸಿದ್ದ ಉದ್ಯೋಗಕ್ಕೆ ಕರೆ ಬರುವುದು. ದಾಂಪತ್ಯ ಜೀವನದಲ್ಲಿ ವಿರಸ ಮೂಡಬಹುದು, ಹೊಂದಾಣಿಕೆ ಅಗತ್ಯ. ವ್ಯಾಪಾರಿಗಳು ನಷ್ಟ ಅನುಭವಿಸಬೇಕಾಗಬಹುದು. ಎಚ್ಚರಿಕೆ ಅಗತ್ಯ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಉತ್ತರಾಭದ್ರ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಪೂರ್ವಾಭದ್ರ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.