ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಗುರುವಾರ, 25 ಜುಲೈ 2019 (08:54 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಜೀವನದಲ್ಲಿ ಅಭಿವೃದ್ಧಿ ಕಾಣುವ ದಿನಗಳಿವು. ವ್ಯಾಪಾರ, ವಹಿವಾಟಿನಲ್ಲಿ ನಿವ್ವಳ ಲಾಭ ಗಳಿಸುವಿರಿ. ಸಂಗಾತಿಯಿಂದ ಸಹಕಾರ ಸಿಗುವುದು. ಆದರೆ ಆರೋಗ್ಯದ ಚಿಂತೆ ಮಾತ್ರ ಕಾಡುವುದು. ದೇವತಾ ಪ್ರಾರ್ಥನೆ ಮಾಡಿ.
 
ವೃಷಭ: ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸಬಹುದು. ಧನವ್ಯಯವಾದರೂ ಹಣ ಸಂಪಾದನೆಗೆ ನಾನಾ ಮಾರ್ಗಗಳು ತೋರಿಬರಲಿವೆ. ಸಾಲಗಾರರಿಂದ ಮುಕ್ತಿ ಸಿಗುವುದು. ಉದ್ಯೋಗದಲ್ಲಿ ಮಹತ್ವದ ಬದಲಾವಣೆಯಾಗಲಿದೆ.
 
ಮಿಥುನ: ಸಾಂಸಾರಿಕವಾಗಿ ಸಂಗಾತಿ ಮೇಲೆ ತಪ್ಪು ತಿಳುವಳಿಕೆಯುಂಟಾಗಿ ಮುನಿಸಿಗೆ ಕಾರಣವಾಗುವುದು. ಹಿತ ಶತ್ರುಗಳ ಮೇಲೆ ನಿಗಾ ಇಡಿ. ಉದ್ಯೋಗದಲ್ಲಿ ಕಾರ್ಯದೊತ್ತಡವಿರಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ.
 
ಕರ್ಕಟಕ: ಖರ್ಚು ವೆಚ್ಚಗಳಲ್ಲಿ ಮಿತಿಯಿರಲಿ. ಹಂತ ಹಂತವಾಗಿ ಆರ್ಥಿಕ ಅಭಿವೃದ್ಧಿ ತೋರಿಬರಲಿದೆ. ಅಂದುಕೊಂಡ ಕಾರ್ಯಗಳನ್ನು ನೆರವೇರಿಸುವಿರಿ. ಮೇಲಧಿಕಾರಿಗಳ ಅಸಮಾಧಾನಕ್ಕೆ ಗುರಿಯಾಗಬೇಕಾದೀತು.
 
ಸಿಂಹ: ಸಹೋದರ ಸಂಬಂಧಿಗಳ ಮದುವೆ ಸಂಬಂಧ ಓಡಾಟ ನಡೆಸಬೇಕಾಗುತ್ತದೆ. ಅನಿರೀಕ್ಷಿತ ಖರ್ಚು ವೆಚ್ಚಗಳು ತಲೆದೋರಬಹುದು. ಪ್ರಯತ್ನ ಬಲಕ್ಕೆ ತಕ್ಕ ಫಲ ದೊರೆಯಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ಕನ್ಯಾ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳು ಅಸೂಯೆಪಟ್ಟು ನಿಮ್ಮ ಏಳಿಗೆಗೆ ಅಡ್ಡಿ ಮಾಡುವರು. ಆದರೆ ನಿಮ್ಮ ಬೆಲೆಯನ್ನು ಯಾರೂ ಕಸಿಯಲು ಸಾಧ‍್ಯವಿಲ್ಲ. ಸಾಂಸಾರಿಕವಾಗಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವುತ್ತೀರಿ.
 
ತುಲಾ: ಉದ್ಯಮಿಗಳು, ವ್ಯಾಪಾರಿಗಳಿಗೆ ಲಾಭ ತಂದುಕೊಡುವಂತಹ ಹೊಸ ಅವಕಾಶಗಳು ತೋರಿಬರಲಿದೆ. ಪಾಲಿಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸಾಂಸಾರಿಕವಾಗಿ ಸಂಗಾತಿಯ ಮನೋಕಾಮನೆಗಳನ್ನು ಪೂರೈಸಬೇಕಾಗುತ್ತದೆ.
 
ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ತಾಳ್ಮೆಗೆಟ್ಟು ಕೆಳ ಹಂತದ ನೌಕರರ ಮೇಲೆ ಕೋಪ ತಾಪ ಪ್ರದರ್ಶಿಸಲು ಹೋಗುವಿರಿ. ದುಡುಕಿನ ವರ್ತನೆಯಿಂದ ಕಾರ್ಯ ಸಾಧನೆಯಾಗದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ ಸಿಗುವುದು.
 
ಧನು: ಆರ್ಥಿಕವಾಗಿ ಪ್ರತಿಕೂಲ ಪರಿಣಾಮದಿಂದ ಅಂದುಕೊಂಡ ಕಾರ್ಯಗಳು ನೆರವೇರದು. ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಮಕರ: ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಸಾಮಾಜಿಕ ಕಾರ್ಯಗಳಿಗೆ ಮುಂದಾಳತ್ವ ವಹಿಸುವಿರಿ. ಸರ್ಕಾರಿ ಕೆಲಸಗಳಲ್ಲಿ ಜಯ ಸಿಗುವುದು. ಆರೋಗ್ಯದಲ್ಲಿ ಸುಧಾರಣೆ.
 
ಕುಂಭ: ಕಾರ್ಯ ಸಿದ್ಧಿಗಾಗಿ ದೂರ ಸಂಚಾರ ಮಾಡಬೇಕಾಗುತ್ತದೆ. ಆದರೆ ಕಳ್ಳತನದ ಭೀತಿಯಿದೆ ಎಚ್ಚರಿಕೆ ಅಗತ್ಯ. ವೃತ್ತಿರಂಗದಲ್ಲಿ ಮುನ್ನಡೆ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ದೇವತಾ ಪ್ರಾರ್ತನೆ ಮಾಡಿ.
 
ಮೀನ: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಸಂತಸದ ವಾತಾವರಣವಿರಲಿದೆ. ಉದ್ಯೋಗದಲ್ಲಿ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಸುವಿರಿ. ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆಯಿರಲಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಯಾವ ನಕ್ಷತ್ರದಲ್ಲಿ ಯಾವ ದೇವತೆ ಜನಿಸಿದ್ದಾರೆ?

ಬೆಂಗಳೂರು: ಯಾವ ನಕ್ಷತ್ರದಲ್ಲಿ ಯಾವೆಲ್ಲಾ ದೇವತೆಗಳು ಜನಿಸಿದ್ದಾರೆ ಎಂದು ನೋಡೋಣ.

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ರೇವತಿ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.