ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ದೃಢ ನಿರ್ಧಾರದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗುವುದು. ಉದ್ಯೋಗ ರಂಗದಲ್ಲಿ ಕೆಳ ಹಂತದ ನೌಕರರಿಂದ ಕಿರಿ ಕಿರಿಯಾಗುವುದು. ಸಂಗಾತಿಯ ಸಹಕಾರವಿರಲಿದೆ. ಕೌಟುಂಬಿಕವಾಗಿ ಮಕ್ಕಳ ಭವಿಷ್ಯದ ಯೋಚನೆಯಾಗುವುದು.ವೃಷಭ: ಪರಿಸ್ಥಿತಿಗೆ ತಕ್ಕಂತೆ ನಡೆದುಕೊಂಡರೆ ತೊಂದರೆಯಾಗದು. ದುಡುಕಿನ ವರ್ತನೆ ತೋರದಿರಿ. ದಾಯಾದಿಗಳಿಂದ ಆಸ್ತಿ ಕುರಿತಾದ ವಿವಾದಗಳು ಎದುರಾಗಲಿವೆ. ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ. ದಿನದಂತ್ಯಕ್ಕೆ ಶುಭ ಸುದ್ದಿ.ಮಿಥುನ: ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ಎದುರಾಗುವುದದರಿಂದ ಕಾರ್ಯಸಾಧನೆಗೆ ಅಡ್ಡಿಯಾಗುವುದು.