ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅನಿರೀಕ್ಷಿತವಾಗಿ ಆಪ್ತರ ಭೇಟಿ ಮನಸ್ಸಿಗೆ ಮುದ ನೀಡಲಿದೆ. ಇಷ್ಟಭೋಜನ ಮಾಡುವ ಭಾಗ್ಯವಿದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಕಿರು ಸಂಚಾರ ಯೋಗವಿದೆ. ಖರ್ಚಿನ ಬಗ್ಗೆ ನಿಗಾ ಇರಲಿ.ವೃಷಭ: ಪೋಷಕರ ಬಗ್ಗೆ ಹೆಚ್ಚಿನ ಕಾಳಜಿ, ಜವಾಬ್ಧಾರಿ ಹೊರಬೇಕಾದ ದಿನವಿದು. ಕೌಟುಂಬಿಕ ಜವಾಬ್ಧಾರಿಗಳನ್ನು ಹೊರಬೇಕಾಗುತ್ತದೆ. ಚಾಡಿ ಮಾತುಗಳಿಗೆ ಕಿವೊಗಡಬೇಡಿ. ಹೊಸ ಜನರ ಭೇಟಿ ಸಾಧ್ಯತೆಯಿದೆ.ಮಿಥುನ: ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದ ಸಂಬಂಧಗಳು ಕೂಡಿಬರಲಿದೆ.