ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಸೋಮವಾರ, 29 ಜುಲೈ 2019 (08:51 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 


ಮೇಷ: ವಿವೇಚನೆಯ ಕೊರತೆಯಿಂದ ತೆಗೆದುಕೊಳ್ಳುವ ಕೆಲವು ನಿರ್ಧಾರಗಳಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ. ಆರ್ಥಿಕವಾಗಿ ಖರ್ಚು ವೆಚ್ಚಗಳಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ಹಿತಶತ್ರುಗಳ ತೊಂದರೆ ಎದುರಾಗಲಿದೆ.
 
ವೃಷಭ: ನಿಮಗರಿವಿಲ್ಲದಂತೆಯೇ ಕೆಲವು ಕರ್ತವ್ಯ ಲೋಪಗಳಾಗಿ ಮೇಲಧಿಕಾರಿಗಳಿಂದ ಬೈಸಿಕೊಳ್ಳಬೇಕಾಗುತ್ತದೆ. ತಾಳ್ಮೆಯ ವರ್ತನೆ ಅಗತ್ಯ. ವ್ಯಾಪಾರ ವ್ಯವಹಾರಗಳಲ್ಲಿ ನಿವ್ವಳ ಲಾಭವಾಗಲಿದೆ.
 
ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಆಲಸ್ಯತನ ಕಾಡುವುದು. ದೃಢ ನಿರ್ಧಾರಗಳನ್ನು ಕೈಗೊಳ್ಳಬೇಕಾದ ದಿನವಿದು. ಅವಿವಾಹಿತರಿಗೆ ವಿವಾಹ ಪ್ರಯತ್ನಗಳು ಫಲಗೂಡಲಿವೆ. ಸ್ವಉದ್ಯೋಗಿಗಳಿಗೆ ಲಾಭವಾಗಲಿದೆ.
 
ಕರ್ಕಟಕ: ಸಾಂಸಾರಿಕ ಸಮಸ್ಯೆಗಳಿಗೆ ಪರಿಹಾರ ದೊರಕಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಆದಾಯಕ್ಕೆ ಕೊರತೆಯಾಗದು. ಆದರೆ ಖರ್ಚುವೆಚ್ಚಗಳ ಬಗ್ಗೆ ಎಚ್ಚರಿಕೆಯಿರಲಿ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ.
 
ಸಿಂಹ: ಆರ್ಥಿಕವಾಗಿ ಹಣಕಾಸಿನ ಅಡಚಣೆಯಿಂದ ಅಂದುಕೊಂಡ ಕಾರ್ಯಗಳಿಗೆ ವಿಘ್ನ ತೋರಿಬರಲಿದೆ. ಚಾಲಕ ವೃತ್ತಿಯವರಿಗೆ ಅಪಘಾತದ ಭೀತಿಯಿದೆ. ಅಧಿಕ ಓಡಾಟದಿಂದ ಅನಾರೋಗ್ಯವಾಗದಂತೆ ಎಚ್ಚರವಹಿಸಿ.
 
ಕನ್ಯಾ: ಕಷ್ಟಕಾಲದಲ್ಲಿ ಬಂಧು ಮಿತ್ರರ ಸಹಾಯ ದೊರಕಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ಮಾಡುವಿರಿ. ವೃತ್ತಿರಂಗದಲ್ಲಿ ತಾಳ್ಮೆಯಿಂದ ಹೆಜ್ಜೆಯಿಡುವುದು ಮುಖ್ಯ. ದೇವತಾ ಪ್ರಾರ್ಥನೆ ಮಾಡಿ.
 
ತುಲಾ: ದುಡುಕು ವರ್ತನೆಯಿಂದ  ಕೆಲಸ ಕೆಟ್ಟೀತು. ಹಿರಿಯರೊಂದಿಗೆ ನಿಷ್ಠುರವಾಗಿ ಮಾತನಾಡಬೇಡಿ. ಸಾಮಾಜಿಕವಾಗಿ ಸ್ಥಾನ ಮಾನ ಹೆಚ್ಚುವುದು. ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.
 
ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಶತ್ರುಬಾಧೆ. ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ಧಾರಿಗಳು ಹೆಗಲಿಗೇರಲಿವೆ. ಚಾಡಿ ಮಾತುಗಳನ್ನು ಅಲಕ್ಷಿಸುವುದೇ ಒಳ್ಳೆಯದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.
 
ಧನು: ಪ್ರೀತಿ ಪಾತ್ರರ ಅಗಲುವಿಕೆಯ ನೋವು ಕಾಡಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ವೃತ್ತಿ ರಂಗದಲ್ಲಿ ಉನ್ನತ ಸಾಧನೆ ಮಾಡುವಿರಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ. ಆರೋಗ್ಯದಲ್ಲಿ ಕಾಳಜಿಯಿರಲಿ.
 
ಮಕರ: ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣವಿರಲಿದೆ. ಮಕ್ಕಳಿಂದ ಸಂತಸದ ವಾರ್ತೆಗಳು ಕೇಳಿಬಂದೀತು. ಅನಿರೀಕ್ಷಿತವಾಗಿ ಧನಲಾಭವಾಗಲಿದೆ. ಆದರೆ ಈ ದಿನ ಯಾರಿಗೂ ಸಾಲ ಕೊಡಲು ಹೋಗಬೇಡಿ.
 
ಕುಂಭ: ಕುಲದೇವರ ಸೇವೆ ಮಾಡುವಿರಿ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ತಲೆದೋರಬಹುದು. ದಾಯಾದಿಗಳೊಂದಿಗೆ ಕಲಹವಾಗಬಹುದು. ಎಚ್ಚರಿಕೆಯಿಂದಿರಿ. ಹಿರಿಯರ ಸಲಹೆಗಳಿಗೆ ಕಿವಿಗೊಡಿ.
 
ಮೀನ: ದಾಂಪತ್ಯ ಜೀವನದಲ್ಲಿ ಶುಭ ಸುದ್ದಿಯಿದೆ. ಆಲಸ್ಯತನ ಬಿಟ್ಟರೆ ಕಾರ್ಯದಲ್ಲಿ ಸಫಲತೆ ಕಾಣಬಹುದು. ಮಹಿಳಾ ಉದ್ಯೋಗಿಗಳಿಗೆ ಶುಭ ಫಲವಿದೆ. ವಿವಾಹ ಪ್ರಯತ್ನಕ್ಕೆ ಹಿನ್ನಡೆಯಾದೀತು. ದೇವತಾ ಪ್ರಾರ್ಥನೆ ಮಾಡಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಈ ದಿನ ದೀಪ ದಾನ ಮಾಡಿದರೆ ಒಳ್ಳೆಯದು

ಬೆಂಗಳೂರು: ದೀಪ ದಾನ ಮಾಡುವುದರಿಂದ ನಿಮಗೆ ಒಳಿತಾಗುತ್ತದೆ. ದೀಪ ಅದೃಷ್ಟದ ಸಂಕೇತ. ಹೀಗಾಗಿ ಅದನ್ನು ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಒಣಗಿದ ವೀಳ್ಯದೆಲೆ ದಕ್ಷಿಣೆ ಜತೆ ಕೊಟ್ಟರೆ ಈ ತೊಂದರೆಯಾಗುತ್ತದೆ!

ಬೆಂಗಳೂರು: ಹೆಚ್ಚಾಗಿ ದಾನ, ದಕ್ಷಿಣೆ ಕೊಡುವಾಗ ತೆಂಗಿನ ಕಾಯಿ, ಬಾಳೆ ಹಣ್ಣು, ತುಳಸಿ ಜತೆ ವೀಳ್ಯದೆಲೆ, ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.