ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಗೃಹ ಸಂಬಂಧೀ ಕೆಲಸಗಳಲ್ಲಿ ಅಧಿಕ ಓಡಾಟ ನಡೆಸಬೇಕಾಗುತ್ತದೆ. ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸ್ಥಾನ ಮಾನ ಲಭ್ಯವಾಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.ವೃಷಭ: ದಾಯಾದಿಗಳೊಂದಿಗೆ ಕೌಟುಂಬಿಕ ಕಲಹಕ್ಕೆ ಹಿರಿಯರ ಮಧ್ಯಸ್ಥಿಕೆ ವಹಿಸುವುದು ಒಳ್ಳೆಯದು. ದುಡುಕಿನ ವರ್ತನೆಯಿಂದ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಆದಷ್ಟು ಮೌನಕ್ಕೆ ಶರಣಾಗುವುದು ಒಳ್ಳೆಯದು.ಮಿಥುನ: ಆರೋಗ್ಯ ಸಂಬಂಧವಾಗಿ ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಸ್ವ ಉದ್ಯೋಗಿಗಳಿಗೆ ಲಾಭವಾಗಲಿದೆ.