ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು, ಸೋಮವಾರ, 5 ಆಗಸ್ಟ್ 2019 (08:54 IST)

ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


 
ಮೇಷ: ಆರೋಗ್ಯ ಸಮಸ್ಯೆ ಕಾಡುವುದು. ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾಗಲಿದೆ. ಸಂಗಾತಿಯೊಂದಿಗೆ ಆಡಿದ ಮಾತುಗಳಿಗೆ ಪಶ್ಚಾತ್ತಾಪ ಪಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಗಿಗಳ ಸಹಕಾರ ಸಿಗಲಿದೆ.
 
ವೃಷಭ: ಆಸ್ತಿ, ಮನೆ ಖರೀದಿಗೆ ಚಿಂತನೆ ಮಾಡುವಿರಿ.  ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆಯಿದೆ. ವಿನಾಕಾರಣ ಇನ್ನೊಬ್ಬರ ಸಮಸ್ಯೆಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು.
 
ಮಿಥುನ: ಪ್ರೀತಿ ಪಾತ್ರರಿಗಾಗಿ ಹೆಚ್ಚಿನ ಸಮಯ ಮೀಸಲಿಡುವಿರಿ. ಆರೋಗ್ಯ ಸಂಬಂಧ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದು. ಆದರೆ ನಿರುದ್ಯೋಗಿಗಳಿಗೆ ನಿರಾಸೆಯಾಗುವುದು.
 
ಕರ್ಕಟಕ: ಬಹುಕಾಲದ ನಂತರ ಆಪ್ತ ಮಿತ್ರರೊಬ್ಬರ ಭೇಟಿಯಾಗುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗುವುದು. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಅಗತ್ಯ.
 
ಸಿಂಹ: ಇಷ್ಟ ಮಿತ್ರರ ಭೇಟಿ, ಭೋಜನ ಸಾಧ್ಯತೆ. ಆಪ್ತ ವಲಯದವರಿಂದಲೇ ಚಾಡಿ ಮಾತು ಕೇಳಿಬಂದೀತು. ಆದರೆ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ವ್ಯಾಪಾರ ವ್ಯವಾಹರಗಳಲ್ಲಿ ಜಯ ಸಿಗುವುದು.
 
ಕನ್ಯಾ: ಸರಕಾರಿ ಕೆಲಸಗಳಲ್ಲಿ ಜಯ ಸಿಗುವುದು. ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಿರಿ. ಹಿರಿಯರ ಸಲಹೆಗಳಿಗೆ ಕಿವಿಗೊಡುವುದು ಮುಖ್ಯ. ಖರ್ಚು ವೆಚ್ಚದ ಬಗ್ಗೆ ಎಚ್ಚರವಿರಲಿ.
 
ತುಲಾ: ಅವಿವಾಹಿತ ಸಹೋದರಿಯ ಮದುವೆ ಮಾತುಕತೆ ವಿಚಾರವಾಗಿ ಹೆಚ್ಚಿನ ಓಡಾಟ ನಡೆಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಕೆಲವೊಂದು ಖರ್ಚು ವೆಚ್ಚಗಳು ಎದುರಾಗಲಿವೆ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.
 
ವೃಶ್ಚಿಕ: ಪ್ರೀತಿ ಪಾತ್ರರ ಸಂಕಷ್ಟದ ಸಮಯದಲ್ಲಿ ನೆರವಾಗುವಿರಿ. ಅಪವಾದಗಳು ಕೇಳಿಬಂದೀತು. ಎಚ್ಚರಿಕೆ ಅಗತ್ಯ. ಮಹಿಳಾ ಉದ್ಯೋಗಿಗಳಿಗೆ ಶುಭ ಫಲವಿದೆ. ಆದಾಯದಲ್ಲಿ ಸುಧಾರಣೆಯಾದರೂ ಖರ್ಚುಗಳೂ ಹೆಚ್ಚಲಿವೆ.
 
ಧನು: ಕೌಟುಂಬಿಕವಾಗಿ ಗಮನಾರ್ಹ ಬದಲಾವಣೆಗಳು ನಡೆಯಲಿವೆ. ಸಹೋದರರಿಂದ ಕಿರಿ ಕಿರಿ ಇರಬಹುದು. ಆದರೆ ಮಕ್ಕಳ ವಿಚಾರದಲ್ಲಿ ಸಂತಸದ ವಾರ್ತೆಯಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ತಕ್ಕ ಪ್ರತಿಫಲ ಸಿಗುವುದು.
 
ಮಕರ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಸಂಗಾತಿಯ ಮನೋಕಾಮನೆಗಳನ್ನು ಪೂರೈಸಬೇಕಾಗುತ್ತದೆ. ಖರ್ಚಿನ ಬಗ್ಗೆ ಹಿಡಿತವಿರಲಿ.
 
ಕುಂಭ: ಇಷ್ಟು ದಿನಗಳಿಂದ ಕಾಡುತ್ತಿದ್ದ ಮಾನಸಿಕ ಕ್ಷೋಭೆಗೆ ಒಂದು ಪರಿಹಾರ ಸಿಗಲಿದೆ.  ಆದರೆ ದೈಹಿಕ ಆರೋಗ್ಯದಲ್ಲಿ ಏರುಪೇರಾಗಬಹುದು. ಪ್ರೀತಿ ಪಾತ್ರರೊಂದಿಗೆ ಕಿರು ಸಂಚಾರ ಮಾಡುವಿರಿ. ದೇವತಾ ಪ್ರಾರ್ಥನೆ ಮಾಡುವುದನ್ನು ಮರೆಯಬೇಡಿ.
 
ಮೀನ: ಅವಿವಾಹಿತರಿಗೆ ಅನಿರೀಕ್ಷಿತವಾಗಿ ಯೋಗ್ಯ ಸಂಬಂಧ ಕೂಡಿಬರುವುದು. ಆದಾಯ ಹೆಚ್ಚಿ ಹಂತ ಹಂತವಾಗಿ ಅಭಿವೃದ್ಧಿ ಕಾಣುವಿರಿ. ಸ್ವ ಉದ್ಯೋಗಿಗಳಿಗೆ ಮುನ್ನಡೆಯಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಈ ದಾನ ಮಾಡಿದರೆ ಯಮದೂತರ ಭಯದಿಂದ ದೂರವಾಗಬಹುದು!

ಬೆಂಗಳೂರು: ಗರುಡ ಪುರಾಣದ ಪ್ರಕಾರ ಹತ್ತಿಯಿಂದ ಮಾಡಿದ ಬಟ್ಟೆಗಳ ದಾನ ಮಾಡಿದವರು ಯಮದೂತರ ಭಯದಿಂದ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಕುಂಕುಮಾರ್ಚನೆ ಹೇಗೆ ಮಾಡಬೇಕು?

ಬೆಂಗಳೂರು: ದೇವಿಗೆ ವಿಶೇಷವಾದ ಪೂಜೆ ಎಂದರೆ ಕುಂಕುಮಾರ್ಚನೆ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.