ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಪಾಲು ಬಂಡವಾಳ ಹೂಡಿಕೆಯಲ್ಲಿ ಲಾಭ ಕಾಣುವಿರಿ. ಆದರೆ ಉದ್ಯೋಗ ಕ್ಷೇತ್ರದಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು ತಪ್ಪದು. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.ವೃಷಭ: ಹೊಸ ಕೆಲಸಗಳಿಗೆ ಚಾಲನೆ ನೀಡಲು ಹೇಳಿ ಮಾಡಿಸಿದ ದಿನ. ಆರ್ಥಿಕವಾಗಿ ಸಾಕಷ್ಟು ಧನಾಗಮನವಾಗಲಿದೆ. ಸರಕಾರಿ ಕೆಲಸಗಳಲ್ಲಿ ಜಯ. ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.ಮಿಥುನ: ಕೃಷಿ ಕ್ಷೇತ್ರದಲ್ಲಿರುವವರಿಗೆ ಸಾಕಷ್ಟು ಲಾಭ ಗಳಿಸುವ