ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಸೋಮವಾರ, 19 ಆಗಸ್ಟ್ 2019 (08:35 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಬಾಕಿ ಹಣ ಪಾವತಿಯಾಗಿ ಮನಸ್ಸಿಗೆ ಸಂತಸವಾಗುವುದು. ಹಾಗಿದ್ದರೂ ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ತಪ್ಪದು. ಸಹೋದ್ಯೋಗಿಗಳ ಕಾರ್ಯವೈಖರಿ ಮನಸ್ಸಿಗೆ ಅಸಹನೆ ತರಿಸಲಿದೆ. ಆರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರಿಕೆಯಿರಲಿ.
 
ವೃಷಭ: ಅವಿವಾಹಿತರಿಗೆ ಸೂಕ್ತ ವಿವಾಹ ಸಂಬಂಧಗಳು ಕೂಡಿಬರಲಿವೆ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಮನಸ್ಸು ಮಾಡುವರು. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ ಪ್ರಾಪ್ತಿಯಾಗುವುದು. ವ್ಯಾಪಾರಿಗಳಿಗೆ ಧನಲಾಭವಾಗಲಿದೆ.
 
ಮಿಥುನ: ಹಣಕಾಸಿನ ಮುಗ್ಗಟ್ಟು ತೋರಿಬರಲಿದೆ. ಹಾಗಿದ್ದರೂ ಸೂಕ್ತ ಸಂದರ್ಭದಲ್ಲಿ ಮಿತ್ರರಿಂದ ಸಹಾಯ ಒದಗಿಬರುವುದು. ಕೋಪದ ಕೈಗೆ ಬುದ್ಧಿ ಕೊಡಲು ಹೋದರೆ ಅನಾಹುತವಾದೀತು. ಸಾಂಸಾರಿಕವಾಗಿ ಪತ್ನಿ, ಮಕ್ಕಳೊಂದಿಗೆ ಸಂತಸದ ಕ್ಷಣ ಕಳೆಯುವಿರಿ.
 
ಕರ್ಕಟಕ: ಪ್ರೀತಿ ಪಾತ್ರರೊಂದಿಗೆ ಸುಮಧುರ ಸಮಯ ಕಳೆಯುವಿರಿ. ಹೊಸ ವಸ್ತ್ರಾಭರಣ ಖರೀದಿ ಯೋಗವಿದೆ. ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆಯಿರಲಿ. ವಾಹನ ಖರೀದಿದಾರರಿಗೆ ಸುದಿನ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ದಿನದಂತ್ಯಕ್ಕೆ ಶುಭದಿನ.
 
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ. ನಿಧಾನವಾಗಿ ಅಭಿವೃದ್ಧಿ ಅನುಭವಕ್ಕೆ ಬರುವುದು. ಆದರೆ ವಂಚಕರ ಬಗ್ಗೆ ಎಚ್ಚರಿಕೆಯಿಂದಿರಿ. ಅಪರಿಚಿತರೊಂದಿಗೆ ಸ್ನೇಹ ಸಂಬಂಧ ಮಾಡುವ ಮೊದಲು ಎಚ್ಚರಿಕೆಯಿರಲಿ. ದೇವತಾ ಪ್ರಾರ್ಥನೆ ಮಾಡಿ.
 
ಕನ್ಯಾ: ಬಂಧು ಮಿತ್ರರೊಂದಿಗೆ ಅನಗತ್ಯ ವಾದ ವಿವಾದ ಮಾಡಿಕೊಳ್ಳುವಿರಿ. ಇದರಿಂದ ಮನಸ್ಸಿಗೆ ಬೇಸರವಾಗುವುದು. ಸಂಗಾತಿಯ ಅವಗಣನೆಗೆ ಗುರಿಯಾಗುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗುವುದು. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಅಧಿಕವಾಗಲಿದೆ.
 
ತುಲಾ: ವ್ಯಾಪಾರ, ವ್ಯವಹಾರದಲ್ಲಿ ಅಧಿಕ ಲಾಭ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯವಿದೆ. ನೂತನ ದಂಪತಿಗಳು ಸುಮಧುರ ಕ್ಷಣ ಕಳೆಯುವರು. ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ.
 
ವೃಶ್ಚಿಕ: ಷೇರು ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಎಷ್ಟೋ ದಿನದಿಂದ ಬಾಕಿಯಿದ್ದ ಕೆಲಸಗಳನ್ನು ಪೂರ್ತಿ ಮಾಡುವಿರಿ. ಕಾರ್ಯನಿಮಿತ್ತ ದೂರ ಸಂಚಾರ ಮಾಡುವಾಗ ಕಳ್ಳತನದ ಭೀತಿಯಿದೆ. ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ ಸಿಗುವುದು.
 
ಧನು: ಆರೋಗ್ಯದಲ್ಲಿ ಏರುಪೇರಾಗುವುದು. ದೇಹಾಯಾಸದಿಂದ ಕಾರ್ಯ ಕ್ಷೇತ್ರದಲ್ಲಿ ಉದಾಸೀನ ಪ್ರವೃತ್ತಿ ಕಂಡುಬರುವುದು. ಕೈಗೊಂಡ ಕಾರ್ಯಗಳಲ್ಲಿ ವಿಘ್ನಗಳು ಎದುರಾದೀತು. ಆದಾಯಕ್ಕಿಂತ ಖರ್ಚು ಹೆಚ್ಚಾಗುವುದು. ತಾಳ್ಮೆ ಅಗತ್ಯ. ದಿನದಂತ್ಯಕ್ಕೆ ನೆಮ್ಮದಿ.
 
ಮಕರ: ಸಾಂಸಾರಿಕವಾಗಿ ನೀವು ಕೈಗೊಳ್ಳುವ ನಿರ್ಧಾರಗಳಿಗೆ ಕುಟುಂಬ ಸದಸ್ಯರ ಸಹಮತ ಸಿಗಲಿದೆ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚಕಗಳಿವೆ. ವ್ಯವಹಾರಗಳಲ್ಲಿ ಜಯ ಪ್ರಾಪ್ತಿಯಾಗುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.
 
ಕುಂಭ: ವ್ಯಾಪಾರಿಗಳಿಗೆ ಉತ್ತಮ ಧನ ಲಾಭವಾಗಲಿದೆ. ಆರ್ಥಿಕವಾಗಿ ಹಣಕಾಸಿಗೆ ಏನೂ ತೊಂದರೆಯಿರದು. ಆದರೆ ಮಹಿಳೆಯರಿಂದ  ಅಪವಾದದ ಭೀತಿಯಿದೆ. ದುರ್ಜನರ ಸಂಗದಿಂದ ಮಾನ ಹಾನಿಯಾದೀತು. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ.
 
ಮೀನ: ಸಾಮಾಜಿಕವಾಗಿ ಉತ್ತಮ ಸ್ಥಾನ ಮಾನ ನಿಮ್ಮದಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಸಂಕಷ್ಟದ ಸಮಯದಲ್ಲಿ ಸಹೋದ್ಯೋಗಿಗಳಿಂದ ನೆರವು ಸಿಗಲಿದೆ. ಕೃಷಿ ಕ್ಷೇತ್ರದಲ್ಲಿರುವವರಿಗೆ ಮುನ್ನಡೆಯಿರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗುವುದು.
ಇದರಲ್ಲಿ ಇನ್ನಷ್ಟು ಓದಿ :