ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ, ಅಭಿವೃದ್ಧಿಯ ವಾತಾವರಣವಿರಲಿದೆ. ವ್ಯಾಪಾರಿಗಳಿಗೆ ನಿವ್ವಳ ಲಾಭ ಸಿಗಲಿದೆ. ಸಂಸಾರದಲ್ಲಿ ಸಂಗಾತಿಯ ಜತೆ ಅಸಮಾಧಾನಗಳಿಂದ ಶಾಂತಿ ಭಂಗವಾಗಲಿದೆ. ಆದರೂ ಕೌಟುಂಬಿಕ ಜವಾಬ್ಧಾರಿಗಳನ್ನು ನಿಭಾಯಿಸಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.ವೃಷಭ: ಆರೋಗ್ಯದಲ್ಲಿ ಏರುಪೇರಾಗಬಹುದು, ಕಾಳಜಿವಹಿಸುವುದು ಮುಖ್ಯ. ಸಣ್ಣದಾಗಿ ತೋರಿಬರುವ ಸಮಸ್ಯೆಗಳ ಬಗ್ಗೆ ಅಸಡ್ಡೆ ಮಾಡಿದರೆ ಮುಂದೆ ಅದೇ ದೊಡ್ಡ ತೊಂದರೆಯಾದೀತು. ಎಚ್ಚರಿಕೆಯಿರಲಿ. ಕಾರ್ಯಕ್ಷೇತ್ರದಲ್ಲಿ ಸುಧಾರಣೆ ತೋರಿಬಂದೀತು.ಮಿಥುನ: ಅನವಶ್ಯಕವಾಗಿ ದುಡುಕು ಮಾತನಾಡಿ