ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕೌಟುಂಬಿಕವಾಗಿ ಕಿರು ಪ್ರವಾಸ, ಪ್ರೀತಿ ಪಾತ್ರರ ಭೇಟಿ ಸಾಧ್ಯತೆ. ಹಾಗಿದ್ದರೂ ಸಂಗಾತಿಯ ಕೆಲವೊಂದು ನಿರ್ಧಾರಗಳು ಪಥ್ಯವಾಗದೇ ಬೇಸರವಾಗುವುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ದೂರ ಸಂಚಾರ ಸಾಧ್ಯತೆ.ವೃಷಭ: ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ಮುನ್ನಡೆ ಯೋಗವಿದೆ. ಯಂತ್ರ ಸಂಬಂಧವಾದ ಕೆಲಸ ಮಾಡುವವರಿಗೆ ಯಶಸ್ಸು. ನಿರುದ್ಯೋಗಿಗಳಿಗೆ ಅವಕಾಶಗಳು ಹುಡುಕಿಕೊಂಡು ಬರಲಿವೆ. ಕೌಟುಂಬಿಕವಾಗಿ ಕೆಲವೊಂದು ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ.ಮಿಥುನ: ಕೌಟುಂಬಿಕವಾಗಿ ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ