ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ನಿಮ್ಮ ವ್ಯಾಪಾರ,ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಕೆಗೆ ದಾರಿ ಹುಡುಕಲು ಮುಂದಾಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸಾಧು ಸಂತರ ಭೇಟಿ ಸಾಧ್ಯತೆ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ. ಕಿರು ಸಂಚಾರ ಮಾಡಬೇಕಾಗುತ್ತದೆ.ವೃಷಭ: ವಿದ್ಯಾರ್ಥಿಗಳಿಗೆ ಪ್ರಯತ್ನ ಬಲವಿದ್ದರಷ್ಟೇ ಉತ್ತಮ ಫಲಿತಾಂಶ ಸಿಗಬಹುದು. ಕಾರ್ಯನಿಮಿತ್ತ ಅಧಿಕ ಓಡಾಟದಿಂದ ದೇಹಾಯಾಸವಾಗುವುದು. ಆರೋಗ್ಯದಲ್ಲಿ ಏರುಪೇರಾಗದಂತೆ ಎಚ್ಚರಿಕೆ ವಹಿಸಿ. ಆರ್ಥಿಕವಾಗಿ ಧನಾಗಮನವಾಗಲಿದೆ. ದಿನದಂತ್ಯಕ್ಕೆ ಶುಭ ಸುದ್ದಿ.ಮಿಥುನ: ದೇಹಾರೋಗ್ಯದ ಬಗ್ಗೆ