ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕಾರ್ಯಕ್ಷೇತ್ರದಲ್ಲಿ ಅಡಚಣೆಗಳು ಕಂಡುಬರಲಿದೆ. ನಿಮ್ಮ ಮನಸ್ಸಿಗೆ ವಿರುದ್ಧವಾದ ಕೆಲಸಗಳನ್ನು ಬಲವಂತವಾಗಿ ಮಾಡಬೇಕಾಗುತ್ತದೆ. ಸ್ತ್ರೀಯರಿಗೆ ಸಾಂಸಾರಿಕವಾಗಿ ಶುಭಫಲಗಳಿವೆ. ಕೌಟುಂಬಿಕವಾಗಿ ನೆಮ್ಮದಿಯಿರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಕೃಷಿಕರಿಗೆ ಅಂದುಕೊಂಡ ಕೆಲಸಗಳು ನೆರವೇರಿ ನಿವ್ವಳ ಲಾಭ ಕೈಗೆ ಬರಲಿವೆ. ಆದಾಯಕ್ಕೆ ತೊಂದರೆಯಾಗದು. ಆದರೆ ಖರ್ಚು ವೆಚ್ಚಗಳು ಅಧಿಕವಾಗುವುದು. ಸಾಂಸಾರಿಕವಾಗಿ ದಂಪತಿಗಳಲ್ಲಿ ಮನಸ್ತಾಪವಾಗದಂತೆ ಎಚ್ಚರವಹಿಸಬೇಕು.ಮಿಥುನ: ಇಂದು ನೀವು ಎಷ್ಟು