ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ದೂರ ಸಂಚಾರದಿಂದ ಕಾರ್ಯಸಿದ್ಧಿ. ವೈಯಕ್ತಿಕವಾಗಿ ಆರೋಗ್ಯದ ಮೇಲೆ ಕಾಳಜಿ ಇರಲಿ. ಸಂಗಾತಿಯೊಂದಿಗೆ ಸಾಮರಸ್ಯದ ಕೊರತೆ ಕಾಡುವುದು. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ಧಾರ್ಮಿಕ ಕಾರ್ಯಳಿಗಾಗಿ ಧನವಿನಿಯೋಗವಾಗಲಿದೆ.ವೃಷಭ: ಅನಗತ್ಯವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ಹಣಕಾಸಿನ ಮುಗ್ಗಟ್ಟಿನ ಪರಿಸ್ಥಿತಿ ಎದುರಿಸಲು ಇಂದೇ ಸಜ್ಜಾಗಿ. ದೂರ ಪ್ರಯಾಣದಲ್ಲಿ ವಿಘ್ನಗಳ ಸಾಧ್ಯತೆಯಿದೆ. ದೇಹಾರೋಗ್ಯದಲ್ಲಿ ಸುಧಾರಣೆಯಾಗುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ.ಮಿಥುನ: ಹಳೆ ಮಿತ್ರರ