ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಅನಿರೀಕ್ಷಿತವಾಗಿ ಬಂಧುಮಿತ್ರರ ಭೇಟಿ ಸಾಧ್ಯತೆಯಿದೆ. ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚಲಿವೆ. ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ಆದರೂ ತಾಳ್ಮೆಯಿಂದ ನಡೆದುಕೊಂಡರೆ ನೆಮ್ಮದಿಗೆ ಕೊರತೆಯಿರದು. ಖರ್ಚು ವೆಚ್ಚದ ಬಗ್ಗೆ ಕಾಳಜಿಯಿರಲಿ.ವೃಷಭ: ಅಂದುಕೊಂಡ ಕೆಲಸ ಕಾರ್ಯಗಳನ್ನು ನೆರವೇರಿಸಲು ವಿಘ್ನಗಳು ಎದುರಾಗಬಹುದು. ಎದೆಗುಂದದೇ ಮುನ್ನಡೆಯಬೇಕು. ಕುಲದೇವರ ಪ್ರಾರ್ಥನೆಯೊಂದಿಗೆ ದಿನದ ಆರಂಭ ಮಾಡಿ. ಹೊಸ ವಸ್ತುಗಳ ಖರೀದಿ ಸಾಧ್ಯತೆಯಿದೆ.ಮಿಥುನ: ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಸಿದ್ಧತೆ ನಡೆಸುವಿರಿ.