ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಕಿರಿ ಕಿರಿಯಿಂದ ತಾಳ್ಮೆ ತಪ್ಪುವ ಪ್ರಸಂಗಗಳು ಎದುರಾಗಬಹುದು. ಅವಿವಾಹಿತರಿಗೆ ವಿವಾಹ ಪ್ರಯತ್ನಕ್ಕೆ ಮುನ್ನಡೆ ಸಿಗಲಿದೆ. ಸಾಮಾಜಿಕ ರಂಗದಲ್ಲಿ ಉನ್ನತ ಸ್ಥಾನ ಮಾನ ಯೋಗವಿದೆ. ದಿನದಂತ್ಯಕ್ಕೆ ನೆಮ್ಮದಿ.ವೃಷಭ: ವೃತ್ತಿರಂಗದಲ್ಲಿ ಹೆಚ್ಚಿನ ಜವಾಬ್ಧಾರಿಗಳು ಹೆಗಲಿಗೇರಲಿವೆ. ನಿಮ್ಮ ಪ್ರಗತಿಗೆ ಪೂರಕವಾದ ಅನೇಕ ಅವಕಾಶಗಳು ಎದುರಾಗಲಿವೆ. ಬಳಸಿಕೊಳ್ಳಬೇಕಷ್ಟೇ. ಹೂಡಿಕೆ ವ್ಯವಹಾರದಲ್ಲಿ ಲಾಭ ಕಂಡುಬರುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.ಮಿಥುನ: ವ್ಯಾಪಾರ ವ್ಯವಹಾರದಲ್ಲಿ