ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಆದಾಯ ವೃದ್ಧಿಸಲು ಹೊಸ ಯೋಜನೆಗಳಿಗೆ ಕೈಹಾಕಿದರೆ ನಷ್ಟವಾಗುವ ಭೀತಿಯಿದೆ. ಕಷ್ಟದ ಸಂದರ್ಭದಲ್ಲಿ ಸ್ನೇಹಿತರ ಸಹಾಯ ಸಿಗುವುದು. ಸರಕಾರಿ ಕೆಲಸಗಾರರಿಗೆ ಮುನ್ನಡೆಯಿರಲಿದೆ. ಸಾಂಸಾರಿಕವಾಗಿ ಹೊಂದಾಣಿಕೆಯ ಕೊರತೆ ಉಂಟಾಗಬಹುದು.ವೃಷಭ: ಮಹಿಳೆಯರಿಗೆ ನೂತನ ವಸ್ತ್ರಾಭರಣ ಖರೀದಿ ಯೋಗವಿದೆ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಆದರೆ ಖರ್ಚು ವೆಚ್ಚದ ಬಗ್ಗೆ ಮಿತಿಯಿರಲಿ. ಮನೆಯಲ್ಲಿ ಮಂಗಲ ಕಾರ್ಯಗಳು ನೆರವೇರಲಿವೆ. ದೇಹಾರೋಗ್ಯದಲ್ಲಿ ಏರುಪೇರಾಗಬಹುದು.ಮಿಥುನ: ವೃತ್ತಿರಂಗದಲ್ಲಿ ಕಾರ್ಯದೊತ್ತಡ ಕಂಡುಬರಲಿದೆ.