ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕೌಟುಂಬಿಕವಾಗಿ ಕೆಲವೊಂದು ಜವಾಬ್ಧಾರಿಗಳು ನಿಮ್ಮ ಮನಸ್ಸನ್ನು ಹೈರಾಣಾಗಿಸಲಿದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳು ಮೂಡಬಹುದು. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕ ವಾತಾವರಣವಿರಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ನಿಮ್ಮ ಬಗ್ಗೆ ಪ್ರಶಂಸೆ ವ್ಯಕ್ತವಾಗುವುದು. ನಿಮ್ಮ ಕ್ರಿಯಾತ್ಮಕತೆಯಿಂದ ಉತ್ತಮ ಫಲ ಪಡೆಯುವಿರಿ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರದಿಂದಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಹುಡುಕಾಟದಲ್ಲಿ ಯಶಸ್ಸು ಸಿಗಲಿದೆ.ಮಿಥುನ: ವ್ಯಾಪಾರ, ವ್ಯವಹಾರಗಳು ಹೆಚ್ಚು ಲಾಭದಾಯಕವೆನಿಸಲಿದೆ