ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಬರಬೇಕಾಗಿರುವ ಬಾಕಿ ಹಣ ಬರಲಿದೆ. ಆದರೆ ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ಗಮನ ಕೊಡಲೇಬೇಕು. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಕೌಟುಂಬಿಕವಾಗಿ ನೀವು ಹೆಚ್ಚಿನ ಜವಾಬ್ಧಾರಿ ಹೊರಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.ವೃಷಭ: ವಾಹನ ರಿಪೇರಿಗಾಗಿ ಹೆಚ್ಚಿನ ಖರ್ಚು ವೆಚ್ಚಗಳಾಗಬಹುದು. ಮನಸ್ಸಿನ ನೆಮ್ಮದಿಗಾಗಿ ದೇವತಾ ಪ್ರಾರ್ಥನೆ ಮಾಡುವಿರಿ. ಇಂದು ಪ್ರಯಾಣವನ್ನು ಆದಷ್ಟು ರದ್ದು ಮಾಡುವುದೇ ಉತ್ತಮ. ವಾಹನ ಸವಾರರಿಗೆ ಅಪಘಾತದ ಭಯವಿದೆ.