ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸ್ವಾಭಿಮಾನ ವಿಚಾರದಲ್ಲಿ ರಾಜಿಯಾಗದ ನಿಮ್ಮ ಗುಣ ಕೆಲವೊಮ್ಮೆ ಸಂಕಷ್ಟ ತರಬಹುದು. ಆದರೆ ನಿಮ್ಮ ಆತ್ಮಸ್ಥೈರ್ಯವೇ ನಿಮಗೆ ಶ್ರೀರಕ್ಷೆ. ನಿಮ್ಮ ಬಗ್ಗೆ ಕೇಳಿಬರುವ ಅಪವಾದಗಳಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಮಾನಸಿಕವಾಗಿ ಗಟ್ಟಿಯಾಗಿ.ವೃಷಭ: ಸಾಂಸಾರಿಕವಾಗಿ ಇದುವರೆಗೆ ಇದ್ದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವಿರಿ. ದುರಾಭಿಮಾನದಿಂದ ಪ್ರಯೋಜನವಾಗದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಆದರೆ ಖರ್ಚು ವೆಚ್ಚಗಳ ಬಗ್ಗೆ ಕಾಳಜಿವಹಿಸಿ. ದಿನದಂತ್ಯಕ್ಕೆ ಕಾರ್ಯಸಾಧನೆಯಾಗುವುದು.ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ವೃತ್ತಿರಂಗದಲ್ಲಿ