ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಸಂಗಾತಿಯ ನಿರ್ಧಾರಗಳು ಮನಸ್ಸಿಗೆ ಅಸಮಾಧಾನ ತರಿಸೀತು. ಹಾಗಿದ್ದರೂ ಕೌಟುಂಬಿಕ ನೆಮ್ಮದಿಗಾಗಿ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಆರ್ಥಿಕವಾಗಿ ನಾನಾ ರೀತಿಯ ಖರ್ಚು ವೆಚ್ಚಗಳು ಕಂಡುಬರಲಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಲಿದೆ. ನಿಮ್ಮ ಕ್ರಿಯಾಶೀಲತೆಗೆ ಫಲ ಸಿಗಲಿದೆ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಸಂಯಮ ಕಳೆದುಕೊಳ್ಳದಿರುವುದು ಮುಖ್ಯ. ಹಿರಿಯರ ದೇಹಾರೋಗ್ಯದ ಬಗ್ಗೆ ಎಚ್ಚರವಿರಲಿ.ಮಿಥುನ: ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ