ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಸಾಮಾಜಿಕವಾಗಿ ಜನಮನ್ನಣೆ ಗಳಿಸುವಿರಿ. ಆದರೆ ಮನೆಯಲ್ಲಿ ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗುವಿರಿ. ಉದ್ಯೋಗ ಕ್ಷೇತ್ರದಲ್ಲಿ ಸಮಧಾನಕರ ದಿನ. ಆರ್ಥಿಕವಾಗಿ ಧನವ್ಯಯವಾಗುವುದು. ದೂರ ಪ್ರಯಾಣಕ್ಕೆ ಸಿದ್ದತೆ ನಡೆಸುವಿರಿ. ಮಕ್ಕಳಿಗೆ ಸಂತಸ ನೀಡುವ ಕೆಲಸ ಮಾಡಬೇಕಾಗುತ್ತದೆ.ವೃಷಭ: ಅನಿರೀಕ್ಷಿತವಾಗಿ ಧನ ಲಾಭವಾಗಲಿದ್ದು ಅಂದುಕೊಂಡ ಕಾರ್ಯಗಳನ್ನು ಸುಗಮವಾಗಿ ನೆರವೇರಿಸುವಿರಿ. ಹೊಸ ವ್ಯವಹಾರಗಳಿಗೆ ಕೈ ಹಾಕಲು ಇದು ಉತ್ತಮ ಸಮಯ. ಸಂಗಾತಿಯೊಂದಿಗೆ ಸಂಯಮದಿಂದ ವರ್ತಿಸಿ. ಆರೋಗ್ಯದ ಬಗ್ಗೆ