Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಮಂಗಳವಾರ, 14 ಜನವರಿ 2020 (08:52 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಸಣ್ಣಪುಟ್ಟ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಭವಿಷ್ಯದ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಸಂಗಾತಿಯ ಜತೆಗಿನ ಮನಸ್ತಾಪಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಹೊಸ ನಿರ್ಧಾರಗಳನ್ನು ಕೈಗೊಳ್ಳುವಿರಿ. ಆತ್ಮವಿಶ್ವಾಸ ಹೆಚ್ಚಲಿದೆ.
 
ವೃಷಭ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ಸಿಗಲಿದೆ. ಆಪ್ತರೊಂದಿಗೆ ಅತ್ಯುತ್ತಮ ಸಮಯ ಕಳೆಯುವಿರಿ. ವೃತ್ತಿರಂಗದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಆದರೆ ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಮಿಥುನ: ಮಾನಸಿಕವಾಗಿ ಒತ್ತಡಗಳಿಂದಾಗಿ ಕೆಲಸದ ಮೇಲೆ ನಿಗಾ ವಹಿಸಲು ಕಷ್ಟವಾಗಬಹುದು. ಮಿತ್ರರಿಂದ ಕಷ್ಟದ ಸಮಯದಲ್ಲಿ ಸಹಾಯ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಕ್ರಿಯಾಶೀಲತೆ ಪ್ರಕಟಗೊಳ್ಳಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
 
ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದ್ದೀರಿ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಒದಗಿ ಬರಲಿದೆ. ಸಾಂಸಾರಿಕವಾಗಿ ಭಿನ್ನಾಭಿಪ್ರಾಯಗಳು ಕಂಡುಬರಬಹುದು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ಸಿಂಹ: ಇಂದು ಅನಿರೀಕ್ಷಿತವಾಗಿ ನಿಮ್ಮ ಬದುಕಿಗೆ ತಿರುವು ಸಿಗುವಂತಹ ಘಟನೆಗಳು ನಡೆಯಲಿವೆ. ಹೊಸ ಮಿತ್ರರ ಭೇಟಿ ಮಾಡಲಿದ್ದೀರಿ. ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.
 
ಕನ್ಯಾ: ಕೆಲವು ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಕಾಡಬಹುದು. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ. ಸರಕಾರಿ ಕೆಲಸಗಳಲ್ಲಿ ಜಯ ಸಿಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಪ್ರೇಮಿಗಳಿಗೆ ಹಿರಿಯರ ಒಪ್ಪಿಗೆ ಸಿಗಲಿದೆ.
 
ತುಲಾ: ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗುವರು. ಸಾಂಸಾರಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಹಿರಿಯರ ತೀರ್ಥ ಯಾತ್ರೆಗೆ ಸಿದ್ಧತೆ ನಡೆಸುವಿರಿ. ಕೋರ್ಟು ಕಚೇರಿ ವ್ಯವಹಾರಗಳು ಕೈಗೂಡಲಿವೆ. ದಿನದಂತ್ಯಕ್ಕೆ ಶುಭ ಸುದ್ದಿ.
 
ವೃಶ್ಚಿಕ: ನಿಮ್ಮ ದುಡುಕು ಮಾತು, ವರ್ತನೆ ಇತರರಿಗೆ ಹಿಡಿಸದೇ ಹೋಗಬಹುದು. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರವಾಗಿರಿ. ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗಬಹುದು. ಹೊಸ ಯೋಜನೆಗೆ ಕೈ ಹಾಕಲು ಕೆಲವು ದಿನ ಕಾಯುವುದು ಒಳಿತು.
 
ಧನು: ಪ್ರೇಮಿಗಳ ಪಾಲಿಗೆ ಇಂದು ಮಹತ್ವದ ದಿನ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಮುನ್ನಡೆ ದೊರಕಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಹಿತಶತ್ರುಗಳಿಂದ ವಂಚನೆಗೊಳಗಾಗಬೇಕಾದೀತು, ಎಚ್ಚರ. ಸಂಗಾತಿಯ ಸಲಹೆಗೆ ಕಿವಿಗೊಡಿ.
 
ಮಕರ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಗೆ ಭಂಗವಾಗಲಿದೆ. ದೂರ ಪ್ರಯಾಣ ಸಂದರ್ಭದಲ್ಲಿ ಕಳ್ಳತನದ ಭೀತಿಯಿದೆ, ಎಚ್ಚರ. ವಾಹನ, ಭೂಮಿ ಖರೀದಿಗೆ ವೆಚ್ಚವಾಗಲಿದೆ. ವೃತ್ತಿರಂಗದಲ್ಲಿ ಸಾಮರ್ಥ್ಯ ಮೀರಿದ ಕೆಲಸ ನಿಮ್ಮದಾಗಲಿದೆ. ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ.
 
ಕುಂಭ: ವೃತ್ತಿರಂಗದಲ್ಲಿ ನಿಮ್ಮ ಮೇಲೆ ವಿನಾಕಾರಣ ಅಪವಾದಗಳು ಕೇಳಿಬಂದೀತು. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರ. ಸಾಂಸಾರಿಕವಾಗಿ ಸಮಾಧಾನಕರ ದಿನಗಳಿವು. ಮಕ್ಕಳ ವಿಚಾರದಲ್ಲಿ ಸಂತಸದ ವಾರ್ತೆ ಕೇಳಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
 
ಮೀನ: ನಿಮ್ಮ ನೆರೆಹೊರೆಯವರೊಂದಿಗೆ ನೀರಿನ ವಿಚಾರಕ್ಕೆ ಕಿರಿ ಕಿರಿಯಾಗಬಹುದು. ವಾಹನ ಸವಾರರಿಗೆ ಅಪಘಾತದ ಭೀತಿಯಿದೆ. ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಖರ್ಚು ವೆಚ್ಚಗಳಿದ್ದರೂ ಆದಾಯಕ್ಕೆ ಕೊರತೆಯಿರದು.
ಇದರಲ್ಲಿ ಇನ್ನಷ್ಟು ಓದಿ :