Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 15 ಜನವರಿ 2020 (08:47 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ವ್ಯಾಪಾರಿಗಳಿಗೆ ಕ್ರಯ ವಿಕ್ರಯಗಳಲ್ಲಿ ಸಾಕಷ್ಟು ಲಾಭ ಸಿಗಲಿದೆ. ಹಿರಿಯರಿಗೆ ತೀರ್ಥ ಯಾತ್ರೆ, ದೇವಾಲಯಗಳ ಸಂದರ್ಶನ ಯೋಗವಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಸಾಂಸಾರಿಕ ನೆಮ್ಮದಿ ಕಂಡುಕೊಳ್ಳುವಿರಿ.
 
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ವಂಚನೆ ಬೆಳಕಿಗೆ ಬರಲಿದೆ. ವಿನಾಕಾರಣ ಅಪವಾದಗಳು ಬರಬಹುದು. ಎಚ್ಚರಿಕೆಯಿಂದಿರಬೇಕು. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದರೆ ಸಂತಸದ ವಾರ್ತೆ ಕೇಳಿಬರಲಿದೆ. ರಾಜಕೀಯ ರಂಗದಲ್ಲಿ ಹಿತಶತ್ರುಬಾಧೆ ಕಂಡುಬರಬಹುದು.
 
ಮಿಥುನ: ವೃತ್ತಿರಂಗದಲ್ಲಿ ನಿಮ್ಮ ಕಣ್ತಪ್ಪಿನಿಂದಾಗುವ ಪ್ರಮಾದಗಳಿಗೆ ಮೇಲಧಿಕಾರಿಗಳಿಂದ ಬೈಸಿಕೊಳ್ಳಬೇಕಾಗಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಅಡೆತಡೆಗಳು ತೋರಿಬಂದೀತು. ಹಿರಿಯರ ಸಲಹೆಗೆ ಕಿವಿಗೊಡಿ. ಕಿರು ಸಂಚಾರ ಯೋಗವಿದೆ.
 
ಕರ್ಕಟಕ: ನ್ಯಾಯಾಲಯದ ಕಲಾಪಗಳಲ್ಲಿ ನಿಮ್ಮ ಪರವಾಗಿ ತೀರ್ಪು ಬರಲಿದೆ. ಸಹೋದರರೊಂದಿಗಿನ ವೈಮನಸ್ಯಗಳು ದೂರವಾಗಲಿದ್ದು ಸಾಂಸಾರಿಕ ನೆಮ್ಮದಿ ಗಳಿಸುವಿರಿ. ಸಾಮಾಜಿಕ ರಂಗದಲ್ಲಿ ಅಪವಾದಗಳು ಬರದಂತೆ ಎಚ್ಚರವಹಿಸಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
 
ಸಿಂಹ: ಮಾನಸಿಕವಾಗಿ ಇದುವರೆಗೆ ಇದ್ದ ಚಿಂತೆ, ಬೇಸರಗಳು ದೂರವಾಗಿ ನೆಮ್ಮದಿ ದೊರಕಲಿದೆ. ನಿಮ್ಮ ನಿರ್ಧಾರಗಳಿಗೆ ಸಂಗಾತಿಯ ಸಹಮತ ಸಿಗಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕ್ರಿಯಾಶೀಲತೆಗೆ ಪ್ರಶಂಸೆ ವ್ಯಕ್ತವಾಗಲಿದೆ.
 
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟವಾಗುವ ಭೀತಿಯಿದೆ. ಮನೆ ಬದಲಾವಣೆಗೆ ಚಿಂತನೆ ನಡೆಸುವಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನತೆ ಕಂಡುಬಂದೀತು. ಬಂಧು ಮಿತ್ರರ ಆಗಮನವಾಗಲಿದ್ದು, ಮನೆಯಲ್ಲಿ ಸಂತಸವಿರಲಿದೆ.
 
ತುಲಾ: ನಿಮ್ಮ ಕೆಲವೊಂದು ನಿರ್ಧಾರದಿಂದ ಬಂಧು ಮಿತ್ರರ ನಿಷ್ಠುರಕ್ಕೆ ಕಾರಣರಾಗುವಿರಿ. ವೃತ್ತಿರಂಗದಲ್ಲಿ ಮುನ್ನಡೆಗೆ ತೊಂದರೆಯಾಗದು. ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ಚಾಡಿ ಮಾತುಗಳಿಂದ ದೂರಿವಿರಿ. ದೇವತಾ ಪ್ರಾರ್ಥನೆ ಮಾಡಿ.
 
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ನೆರವಿನಿಂದ ಬರುವಂತಹ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ನೂತನ ದಂಪತಿಗಳಿಗೆ ಶುಭದಿನ.
 
ಧನು: ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಬಡ್ತಿ ಸಿಗಲಿದೆ. ವೃತ್ತಿರಂಗದಲ್ಲಿ ಮುನ್ನಡೆಗೆ ಅವಕಾಶಗಳಿವೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶ ಬಳಸಿಕೊಳ್ಳಬೇಕು. ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು. ವಿದ್ಯಾರ್ಥಿಗಳಿಗೆ ಶುಭ ವಾರ್ತೆಯಿದೆ.
 
ಮಕರ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ನಿಮಿತ್ತ ದೂರ ಸಂಚಾರ ಮಾಡಬೇಕಾಗಬಹುದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಪಡುವ ಅನಿವಾರ್ಯತೆಯಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ದತೆ ನಡೆಯಲಿದೆ. ಸಾಂಸಾರಿಕ ಸುಖ ಸಿಗಲಿದೆ.
 
ಕುಂಭ: ಇನ್ನೊಬ್ಬರಿಗೆ ಹಣಕಾಸಿನ ಸಹಾಯ ಮಾಡಲು ಹೋಗುವ ಮುನ್ನ ನೂರು ಬಾರಿ ಯೋಚಿಸಿ. ಸಂಗಾತಿಯ ಸಲಹೆಗಳಿಗೆ ಕಿವಿಗೊಡಿ. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಅಧಿಕವಾಗಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಕಡಿವಾಣವಿರಲಿ.
 
ಮೀನ: ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ನಿರಾಸೆಯಾಗಬಹುದು. ಗೃಹಿಣಿಯರಿಗೆ ಕೌಟುಂಬಿಕ ಜವಾಬ್ಧಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ತೃಪ್ತಿ ಸಿಗಲಿದೆ. ಕಾರ್ಯರಂಗದಲ್ಲಿ ಕಿರಿ ಕಿರಿ ತಪ್ಪದು. ದಿನದಂತ್ಯಕ್ಕೆ ಶುಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :