ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ವ್ಯಾಪಾರ ವ್ಯವಹಾರದಲ್ಲಿ ಬಿಡುವಿಲ್ಲದ ಕಾರ್ಯದೊತ್ತಡದಿಂದಾಗಿ ಮನಸ್ಸಿಗೆ ಕಿರಿ ಕಿರಿಯಾಗಬಹುದು. ಮೇಲ್ವರ್ಗದ ಅಧಿಕಾರಿಗಳಿಗೆ ಉನ್ನತ ಹುದ್ದೆಯ ಸ್ಥಾನ ಮಾನ ಸಿಗಲಿದೆ. ಧರ್ಮಕಾರ್ಯಗಳಿಗೆ ಧನವಿನಿಯೋಗ ಮಾಡಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಸಾಂಸಾರಿಕವಾಗಿ ನೆಮ್ಮದಿಗೆ ಭಂಗವಾಗುವ ಘಟನೆಗಳು ನಡೆಯಲಿವೆ. ಹಣಕಾಸಿನ ಅಡಚಣೆ ಕಂಡುಬಂದರೂ ಕಷ್ಟ ಕಾಲದಲ್ಲಿ ಸ್ನೇಹಿತರ ಸಹಾಯ ಒದಗಿಬರಲಿದೆ. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ದಿನದಂತ್ಯಕ್ಕೆ ಶುಭ