Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 16 ಫೆಬ್ರವರಿ 2020 (09:11 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಂಡು ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಇಷ್ಟ ದೇವರ ಪ್ರಾರ್ಥನೆ ಮಾಡುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ವೃಷಭ: ಗೃಹ ಸಂಬಂಧೀ ಕೆಲಸಗಳಲ್ಲಿ ಓಡಾಟ ನಡೆಸಬೇಕಾಗುತ್ತದೆ. ವೃತ್ತಿರಂಗದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ಸಂಗಾತಿಯ ಸಲಹೆ ಪಡೆಯಿರಿ. ಅವಿವಾಹಿತರ ವಿವಾಹ ಪ್ರಸ್ತಾಪಗಳಿಗೆ ಮುನ್ನಡೆ ಸಿಗಲಿದೆ. ಪ್ರೇಮಿಗಳ ಪಾಲಿಗೆ ಶುಭ ದಿನವಾಗಲಿದೆ.
 
ಮಿಥುನ: ಹೊಸ ವ್ಯಾಪಾರ, ವ್ಯವಹಾರಕ್ಕೆ ಕೈ ಹಾಕಲು ಇದು ಸಕಾಲ. ಆರ್ಥಿಕವಾಗಿ ಆದಾಯ ವೃದ್ಧಿಯಾಗಲಿದೆ. ಸಾಲಗಾರರಿಂದ ಮುಕ್ತಿ ಸಿಗಲಿದೆ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಮನಸ್ಸು ಮಾಡುವರು. ಹಳೆಯ ಮಿತ್ರರ ಭೇಟಿ ಸಾಧ್ಯತೆಯಿದೆ.
 
ಕರ್ಕಟಕ: ಮಾತಿನ ಮೇಲೆ ನಿಗಾ ಇರಲಿ. ದುಡುಕು ಮಾತಿನಿಂದ ಪ್ರೀತಿ ಪಾತ್ರರ ಮನಸ್ಸಿಗೆ ನೋವುಂಟುಮಾಡಬೇಡಿ. ಆರ್ಥಿಕವಾಗಿ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ. ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದು. ಎಚ್ಚರಿಕೆ ಅಗತ್ಯ.
 
ಸಿಂಹ: ಸಾಮಾಜಿಕ ಕೆಲಸಗಳಿಂದ ನಿಮಗೆ ಜನಮನ್ನಣೆ ಸಿಗಲಿದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಹಿರಿಯರ ತೀರ್ಥಯಾತ್ರೆಗೆ ಏರ್ಪಾಟು ಮಾಡುವಿರಿ. ಮನೆಗೆ ಅನಿರೀಕ್ಷಿತವಾಗಿ ಬರುವ ಅತಿಥಿಯಿಂದ ಒಳಿತಾಗುವುದು.
 
ಕನ್ಯಾ: ಸಂಗಾತಿಯ ಮನದಾಸೆ ಪೂರೈಸುವಿರಿ. ವ್ಯವಹಾರದಲ್ಲಿ ಹಣಕಾಸಿನ ಅಡಚಣೆಯಿಂದ ಅಡೆತಡೆಗಳುಂಟಾಗಬಹುದು. ಕುಲದೇವರ ಪ್ರಾರ್ಥನೆ ಮಾಡಿ. ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗಬಹುದು.
 
ತುಲಾ: ಸ್ವಜನರಿಂದಲೇ ವಂಚನೆಗೊಳಗಾಗುವ ಪರಿಸ್ಥಿತಿ ಎದುರಾಗಲಿದೆ. ಯಾವುದೇ ವ್ಯವಹಾರ ನಡೆಸುವ ಮೊದಲು ನೂರು ಬಾರಿ ಯೋಚಿಸಿ ಹೆಜ್ಜೆಯಿಡಿ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ದೇವರ ಪ್ರಾರ್ಥನೆ ಮಾಡಿ.
 
ವೃಶ್ಚಿಕ: ಸ್ವ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಮುನ್ನಡೆ ಸಿಗಲಿದೆ. ಮಹಿಳೆಯರಿಗೆ ಉನ್ನತ ಸ್ಥಾನ ಮಾನದ ಯೋಗವಿದೆ. ವಾಸ ಸ್ಥಳ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ. ಮನೆಗೆ ಇಷ್ಟ ಮಿತ್ರರ ಆಗಮನವಾಗಲಿದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕುವುದು ಒಳಿತು.
 
ಧನು: ಕುಟುಂಬ ವರ್ಗದವರ ಆರೋಗ್ಯದ ಚಿಂತೆ ಕಾಡಲಿದೆ. ಸಹೋದರರೊಂದಿಗೆ ಆಸ್ತಿ ವಿಚಾರವಾಗಿ ವಾಗ್ವಾದವಾಗಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಗೆ ಭಂಗವಾಗಬಹುದು. ಕಿರು ಸಂಚಾರ ಮಾಡಬೇಕಾಗುತ್ತದೆ.
 
ಮಕರ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕಾಗಿ ದೂರ ಸಂಚಾರ ಮಾಡಬೇಕಾಗುತ್ತದೆ. ಕೆಳ ಹಂತದ ನೌಕರರಿಗೆ ಉನ್ನತ ಸ್ಥಾನ ಮಾನ ಯೋಗವಿದೆ. ಸಾಂಸಾರಿಕವಾಗಿ ಹೆಚ್ಚಿನ ಹೊಣೆಗಾರಿಕೆ ಹೆಗಲೇರಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ.
 
ಕುಂಭ: ವ್ಯಾಪಾರಿಗಳಿಗೆ ಸಣ್ಣ ಮಟ್ಟಿನ ಲಾಭವಾಗಲಿದೆ. ಎಷ್ಟೋ ದಿನದಿಂದ ಅಂದುಕೊಂಡಿದ್ದ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರಲಿದೆ.  
 
ಮೀನ: ಆರ್ಥಿಕವಾಗಿ ಚೇತರಿಕೆ ಕಂಡುಬರಲಿದ್ದು, ವ್ಯವಹಾರದಲ್ಲಿ ಹಂತ ಹಂತವಾಗಿ ಪ್ರಗತಿ ಕಂಡುಬರಲಿದೆ. ಮಹಿಳೆಯರಿಗೆ ಚಿನ್ನಾಭರಣ ಖರೀದಿಯಿಂದ ಲಾಭವಾಗಲಿದೆ. ಇಷ್ಟಮಿತ್ರರೊಂದಿಗೆ ಪ್ರವಾಸ, ಭೋಜನ ಮಾಡುವ ಯೋಗವಿದೆ. ಆರೋಗ್ಯ ಸಮಸ್ಯೆ ಕಂಡುಬರಬಹುದು, ಎಚ್ಚರಿಕೆ ಅಗತ್ಯ.
ಇದರಲ್ಲಿ ಇನ್ನಷ್ಟು ಓದಿ :