Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಸೋಮವಾರ, 17 ಫೆಬ್ರವರಿ 2020 (08:41 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡದಿಂದ ದೇಹ ಹೈರಾಣಾಗವುದು. ಆರ್ಥಿಕವಾಗಿ ಬರಬೇಕಾಗಿದ್ದ ಬಾಕಿ ಹಣ ಸಂದಾಯವಾಗಲಿದೆ. ಆದರೆ ದುಂದುವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು. ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಪ್ರೀತಿ ಪಾತ್ರರಿಗಾಗಿ ತ್ಯಾಗ ಮಾಡಬೇಕಾಗುತ್ತದೆ.
 
ವೃಷಭ: ವೃತ್ತಿರಂಗದಲ್ಲಿ ಅನೇಕ ರೀತಿಯ ಹೊಸ ಸವಾಲುಗಳಿಗೆ ಸಿದ್ಧರಾಗಬೇಕಾಗುತ್ತದೆ. ಅಧಿಕ ಧನ ಲಾಭ ತರುವ ಯೋಜನೆಗಳ ಕುರಿತು ಚಿಂತನೆ ನಡೆಸಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ಕರೆ ಬರಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆ ಸಿಗಲಿದೆ.
 
ಮಿಥುನ: ಉದ್ಯೋಗದಲ್ಲಿ ಸ್ಥಾನ ಪಲ್ಲಟವಾಗುವ ಸಾಧ‍್ಯತೆಯಿದೆ. ಸರಕಾರಿ ಉದ್ಯೋಗಿಗಳಿಗೆ ಮೇಲ್ದರ್ಜೆಗೆ ಏರುವ ಅವಕಾಶ ಸಿಗುವುದು. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಇಷ್ಟ ಮಿತ್ರರೊಂದಿಗೆ ಭೋಜನ ಮಾಡುವಿರಿ. ದೇವರ ಪ್ರಾರ್ಥನೆ ಮಾಡಿ.
 
ಕರ್ಕಟಕ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ಹೊಸ ವ್ಯವಹಾರಗಳಿಗೆ ಕೈ ಹಾಕಲು ಇದು ಸಕಾಲ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ.
 
ಸಿಂಹ: ಅನಿರೀಕ್ಷಿತವಾಗಿ ಮನೆಗೆ ಬಂಧು ಮಿತ್ರರ ಆಗಮನವಾಗಲಿದ್ದು, ಒಂದು ರೀತಿಯಲ್ಲಿ ಸಂತಸದ ವಾತಾವರಣವಿರಲಿದೆ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು. ಕೆಳ ಹಂತದ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ ಸಂಭವ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಕನ್ಯಾ: ಮಿತ್ರರಿಗೆ ಸಹಾಯ ಮಾಡಲು ಹೋಗಿ ತೊಂದರೆಗೆ ಸಿಲುಕಿಕೊಳ್ಳುವ ಅಪಾಯವಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರ. ಸಂಗಾತಿಯ ಮನದಾಸೆ ಪೂರೈಸಲು ಖರ್ಚು ವೆಚ್ಚಗಳಾಗಲಿವೆ. ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು.
 
ತುಲಾ: ಆಸ್ತಿ ವಿಚಾರದಲ್ಲಿ ದಾಯಾದಿಗಳೊಂದಿಗೆ ಮನಸ್ತಾಪವಾಗಿದೆ. ಹಿರಿಯರ ಮಧ್ಯಸ್ಥಿಕೆಗೆ ಬೆಲೆಕೊಡಿ. ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಮಹಿಳಾ ಉದ್ಯೋಗಿಗಳಿಗೆ ಉನ್ನತ ಸ್ಥಾನ ಮಾನದ ಯೋಗವಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ವೃಶ್ಚಿಕ: ಅನಿರೀಕ್ಷಿತವಾಗಿ ನೀವು ಎಷ್ಟೋ ದಿನದಿಂದ ಅಂದುಕೊಂಡಿದ್ದ ಕೆಲಸಗಳು ಸುಗಮವಾಗಿ ನೆರವೇರಲಿದೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ದೂರವಾಗಲಿವೆ. ಮಕ್ಕಳ ಭವಿಷ್ಯದ ಯೋಜನೆಗಳನ್ನು ಮಾಡುವಿರಿ. ಕೃಷಿಕರಿಗೆ ನಷ್ಟದ ಅರಿವಾಗುವುದು.
 
ಧನು: ಕೌಟುಂಬಿಕವಾಗಿ ನಿರ್ಧಾರ ತೆಗೆದುಕೊಳ್ಳುವಾಗ ಸಹೋದರರೊಂದಿಗೆ ಭಿನ್ನಾಭಿಪ್ರಾಯಗಳಾಗಬಹುದು. ಸಂಗಾತಿಯ ಮಾತಿಗೆ ಬೆಲೆಕೊಡಿ. ದುಡುಕಿನ ಮಾತನಾಡಲು ಹೋಗಬೇಡಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ಸಾಲಗಳಿಂದ ಮುಕ್ತಿ ಹೊಂದುವಿರಿ.
 
ಮಕರ: ದಾಂಪತ್ಯದಲ್ಲಿ ಹೊಂದಾಣಿಕೆ ಕೊರತೆಯಿಂದ ಭಿನ್ನಾಭಿಪ್ರಾಯಗಳಾಗಬಹುದು. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಭೇಟಿ ಯೋಗವಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ವ್ಯವಹಾರದಲ್ಲಿ ಆರ್ಥಿಕವಾಗಿ ಲಾಭ ಗಳಿಸುವಿರಿ.
 
ಕುಂಭ: ಮಿತ್ರರ ಸಲಹೆಯು ಸಕಾಲದಲ್ಲಿ ಸಿಗುವುದರಿಂದ ಕಷ್ಟಗಳಿಂದ ಪಾರಾಗುವಿರಿ. ಹೆಚ್ಚಿನ ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ವಿವಾಹ ಪ್ರಯತ್ನಗಳಿಗೆ ಮುನ್ನಡೆ ಸಿಗಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ.
 
ಮೀನ: ಹೊಸ ಕೆಲಸಕ್ಕೆ ಕೈ ಹಾಕಲು ಮೀನ ಮೇಷ ಎಣಿಸುವ ಪರಿಸ್ಥಿತಿ ನಿಮ್ಮದಾಗಲಿದೆ. ಹಣಕಾಸಿನ ಅಡಚಣೆಗಳು ತೋರಿಬರಲಿದೆ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆಯಿಂದಿರುವುದು ಅಗತ್ಯ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
ಇದರಲ್ಲಿ ಇನ್ನಷ್ಟು ಓದಿ :