Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಮಂಗಳವಾರ, 18 ಫೆಬ್ರವರಿ 2020 (08:59 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ವ್ಯಾವಹಾರಿಕ ಕ್ಷೇತ್ರದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ಎದುರಾಗಲಿದೆ. ಹೆಚ್ಚಿನ ಧನಲಾಭಕ್ಕೆ ನಾನಾ ಮಾರ್ಗಗಳನ್ನು ಹುಡುಕುವಿರಿ. ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ. ಮಕ್ಕಳ ಮನೋಭಿಲಾಷೆ ಪೂರೈಸಬೇಕಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ವೃಷಭ: ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ ಸಾಧ‍್ಯತೆಯಿದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ವ್ಯಾಪಾರಿಗಳಿಗೆ ಸಣ್ಣ ಮಟ್ಟಿನ ಲಾಭ ಕಂಡುಬರಲಿದೆ. ಸಾಂಸಾರಿಕವಾಗಿ ಕೆಲವೊಂದು ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ದೇವರ ಪ್ರಾರ್ಥನೆ ಮಾಡಿ.
 
ಮಿಥುನ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರದೇ ನಿರಾಸೆಯಾಗಬಹುದು. ಸ್ವಯಂ ವೃತ್ತಿಯವರಿಗೆ ಲಾಭದಾಯಕ ದಿನಗಳಿವು. ಕೌಟುಂಬಿಕವಾಗಿ ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ಕಿರು ಸಂಚಾರ ಮಾಡುವಿರಿ.
 
ಕರ್ಕಟಕ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಕಟಿಸಲು ಸಕಾಲ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ಶೈಕ್ಷಣಿಕ ರಂಗದಲ್ಲಿರುವವರಿಗೆ ಬಯಸಿ ಫಲಿತಾಂಶ ಸಿಗಲಿದೆ. ಆದರೆ ನಿಮ್ಮ ದುಡುಕು ವರ್ತನೆಗೆ ಕೊಂಚ ಕಡಿವಾಣ ಹಾಕುವುದು ಉತ್ತಮ.
 
ಸಿಂಹ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ರಾಜಕೀಯ ರಂಗದಲ್ಲಿರುವವರಿಗೆ ಹೆಸರು ಗಳಿಸಲು ಸಂದರ್ಭ ಒದಗಿಬರಲಿದೆ. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರುವುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆ ಉಂಟಾಗಬಹುದು.
 
ಕನ್ಯಾ: ಸಾಲಬಾಧೆಗಳಿಂದ ಮುಕ್ತಿ ಕಾಣುವಿರಿ. ಆರ್ಥಿಕವಾಗಿ ಹಂತ ಹಂತವಾಗಿ ಚೇತರಿಕೆ ಕಂಡುಬರಲಿದೆ. ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಕೃಷಿಕರಿಗೆ ಕೆಲಸದಲ್ಲಿ ಅಡ್ಡಿ ಆತಂಕಗಳು ಬರಬಹುದು. ತಾಳ್ಮೆಯಿಂದ ನಿಭಾಯಿಸಿ.
 
ತುಲಾ: ಉದ್ಯೋಗದಲ್ಲಿ ಬರುವ ಅಡೆತಡೆಗಳ ನಿವಾರಣೆಗೆ ಮಿತ್ರರ ಸಹಾಯ ಪಡೆಯುವಿರಿ. ಹೊಸ ಯೋಜನೆಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಉತ್ತಮ. ಸಂಗಾತಿಯ ದೇಹಾರೋಗ್ಯದಲ್ಲಿ ಏರುಪೇರಾಗಬಹುದು, ಕಾಳಜಿ ವಹಿಸಿ.
 
ವೃಶ್ಚಿಕ: ಹಿರಿಯರಿಂದ ಬಂದ ಬಳವಳಿಗಳು ನಷ್ಟವಾಗುವ ಭೀತಿ ಎದುರಾಗಲಿದೆ. ಮಾನಸಿಕವಾಗಿ ನಿರ್ಧಾರ ಕೈಗೊಳ್ಳುವಾಗ ಗೊಂದಲ ಕಾಡಬಹುದು. ಧಾರ್ಮಿಕ ಕ್ಷೇತ್ರಗಳಿಗೆ ಸಂದರ್ಶನ ನೀಡುವುದರಿಂದ ಮನಸ್ಸಿಗೆ ನೆಮ್ಮದಿಯಾಗುವುದು. ದಿನದಂತ್ಯಕ್ಕೆ ಅನಿರೀಕ್ಷಿತ ಬೆಳವಣಿಗೆ ನಡೆಯಲಿದೆ.
 
ಧನು: ಕೂಡಿಟ್ಟ ಹಣ ಕಷ್ಟ ಕಾಲದಲ್ಲಿ ಬಳಸಲಾಗದೇ ಅಸಹಾಯಕತೆ ಅನುಭವಿಸಲಿದ್ದೀರಿ. ಆಸ್ತಿ ವಿವಾದಗಳ ಬಗೆಹರಿಸಲು ಕೋರ್ಟು ಕಚೇರಿಗಾಗಿ ಅಲೆದಾಡಬೇಕಾದೀತು. ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ಸಿಗಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದು.
 
ಮಕರ: ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ. ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗುವರು. ಮಹಿಳೆಯರಿಗೆ ಚಿನ್ನಾಭರಣ ಖರೀದಿಯಿಂದ ಲಾಭವಾಗಲಿದೆ. ಉದ್ಯೋಗದಲ್ಲಿ ಮಾಡದ ತಪ್ಪಿಗೆ ಬೈಸಿಕೊಳ್ಳಬೇಕಾದೀತು. ಎಚ್ಚರಿಕೆಯಿರಲಿ.
 
ಕುಂಭ: ಕುಟುಂಬ ಕಲಹಗಳು ಪರಿಹಾರವಾಗಲಿದೆ. ಸಹೋದರಿಯ ಮದುವೆ ಸಂಬಂಧ ಓಡಾಟ ನಡೆಸಬೇಕಾಗುತ್ತದೆ. ಬಂಧು ಮಿತ್ರರ ಚಾಡಿ ಮಾತಿನಿಂದ ಮನಸ್ಸಿಗೆ ಬೇಸರವಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ.
 
ಮೀನ: ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರ. ವ್ಯವಹಾರದಲ್ಲಿ ನಯವಂಚಕರಿಂದ ವಂಚನೆಗೊಳಗಾಗುವ ಭೀತಿಯಿದೆ. ಸರಕಾರಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಯೋಗವಿದೆ. ಕೌಟುಂಬಿಕವಾಗಿ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರ ವಹಿಸಿ.
ಇದರಲ್ಲಿ ಇನ್ನಷ್ಟು ಓದಿ :