Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 20 ಫೆಬ್ರವರಿ 2020 (09:04 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಸಹೋದರರ ನಡುವೆ ಕ್ಷುಲ್ಲುಕ ವಿಚಾರಕ್ಕೆ ಮನಸ್ತಾಪ ಉಂಟಾಗಬಹುದು. ತಾಳ್ಮೆಯಿಂದ ನಿಭಾಯಿಸಿ. ನ್ಯಾಯಾಲಯದ ಕಲಾಪಗಳಲ್ಲಿ ಜಯ ಸಿಗಲಿದೆ. ಬಂಧು ಮಿತ್ರರ ಸಹಕಾರ ಸಿಗುವುದು. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು.
 
ವೃಷಭ: ಶೀತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಡಲಿದೆ. ಉದ್ಯೋಗ ರಂಗದಲ್ಲಿ ಎಷ್ಟೇ ಅಡೆತಡೆಗಳಿದ್ದರೂ ನಿಮ್ಮ ಕಾರ್ಯಸಾಧನೆಯನ್ನು ತಡೆಯಲು ಯಾರಿಂದಲೂ ಸಾಧ‍್ಯವಿಲ್ಲ. ಇಷ್ಟಮಿತ್ರರೊಂದಿಗೆ ಪ್ರವಾಸ ಮಾಡುವಿರಿ. ವಿದ್ಯಾರ್ಥಿಗಳಿಗೆ ಮುನ್ನಡೆ ಸಿಗಲಿದೆ.
 
ಮಿಥುನ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಂಗದಲ್ಲಿ ಸಂತಸದ ವಾರ್ತೆ ಸಿಗಲಿದೆ. ಉದ್ಯೋಗದಲ್ಲಿ ಮುಂಬಡ್ತಿ ಯೋಗವಿದೆ. ಅವಿವಾಹಿತ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಬಹುದಿನಗಳ ಬೇಡಿಕೆ ಈಡೇರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.
 
ಕರ್ಕಟಕ: ಬಂಧು ವರ್ಗದವರಿಂದ ಚಾಡಿ ಮಾತು ಕೇಳಿಬಂದೀತು. ರಾಜಕೀಯ ರಂಗದಲ್ಲಿರುವವರಿಗೆ ಹಿನ್ನಡೆ ಉಂಟಾಗಬಹುದು. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.
 
ಸಿಂಹ: ಕಳೆದುಹೋದ ವಸ್ತುಗಳು ಮರಳಿ ಕೈ ಸೇರಲಿವೆ. ಉದ್ಯೋಗದಲ್ಲಿ ಬದಲಾವಣೆಗೆ ಮನಸ್ಸು ಬಯಸುವುದು. ವ್ಯಾಪಾರ, ವ್ಯವಹಾರಗಳಲ್ಲಿ ಮುನ್ನಡೆ ಸಿಗಲಿದೆ. ಹಿರಿಯರಿಗೆ ತೀರ್ಥ ಯಾತ್ರೆಗೆ ಸಿದ್ದತೆ ನಡೆಸಲಿದ್ದಾರೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.
 
ಕನ್ಯಾ: ಕಫ, ಶೀತ ಬಾಧೆಯಿಂದ ದೇಹ ಹೈರಾಣಾಗುವುದು. ಸಂಗಾತಿಯ ಮನದಾಸೆ ಪೂರೈಸಬೇಕಾಗುತ್ತದೆ. ಆಸ್ತಿ ವಿಚಾರವಾಗಿ ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ವಾಹನ ಖರೀದಿಗಾಗಿ ಮಾಡಿದ ಸಾಲ ತೀರಿಸುವ ತಲೆನೋವು ಎದುರಾಗುವುದು. ಎಚ್ಚರಿಕೆಯಿಂದಿರಿ.
 
ತುಲಾ: ದೈಹಿಕ ಆರೋಗ್ಯದಲ್ಲಿ ಸುಧಾರಣೆಯಾಗಿದ್ದರೂ, ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡಿ ಕೆಲಸದಲ್ಲಿ ನಿರುತ್ಸಾಹ ಕಂಡುಬರಲಿದೆ. ಕೂಡಿಟ್ಟ ಹಣ ಖರ್ಚಾಗುವ ಚಿಂತೆಯಾಗಲಿದೆ. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ.
 
ವೃಶ್ಚಿಕ: ಅಂದುಕೊಂಡ ಯೋಜನೆಗಳನ್ನು ಪೂರ್ತಿ ಮಾಡಲು ಸಾಕಷ್ಟು ವಿಘ್ನಗಳು ಎದುರಾಗಲಿವೆ. ದೇವತಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿಯಾಗಲಿದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಮುನ್ನಡೆ ಸಿಗಲಿದೆ. ಆರ್ಥಿಕವಾಗಿ ಆದಾಯಕ್ಕೆ ಮೀರಿ ಖರ್ಚಾಗಲಿದೆ. ಹಿಡಿತವಿರಲಿ.
 
ಧನು: ನೆರೆಹೊರೆಯವರಲ್ಲಿ ಮನಸ್ತಾಪಗಳಾಗದಂತೆ ಎಚ್ಚರಿಕೆ ವಹಿಸಿ. ದುಡುಕು ಮಾತಿನಿಂದ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ಅಧಿಕಾರಿ ವರ್ಗದವರಿಗೆ ಮುಂಬಡ್ತಿ ಯೋಗವಿದೆ.
 
ಮಕರ: ವ್ಯಾಪಾರಿ ವರ್ಗದವರಿಗೆ ಉತ್ತಮ ಲಾಭ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗಬಹುದು. ಕ್ರೀಡಾ ರಂಗದಲ್ಲಿರುವವರಿಗೆ ಉನ್ನತ ಸ್ಥಾನದ ಯೋಗವಿದೆ. ನೂತನ ದಂಪತಿಗಳಲ್ಲಿ ಮಧುಚಂದ್ರ ಭಾಗ್ಯವಿದೆ.
 
ಕುಂಭ: ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ಮನಸ್ಸಿಗೆ ಬೇಸರವಾಗಲಿದೆ. ಮಕ್ಕಳಿಂದ ಸಂತಸದ ವಾರ್ತೆ ಕೇಳಿಬರುವುದು. ಹಿರಿಯರಿಗೆ ಆರೋಗ್ಯದಲ್ಲಿ ಏರುಪೇರಾಗುವುದು. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು, ಆದರೆ ಖರ್ಚು ವೆಚ್ಚಗಳಿಗೆ ಕಡಿವಾಣವಿರಲಿ.
 
ಮೀನ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ವಿವಾಹದ ಪ್ರಯತ್ನದಲ್ಲಿ ಮುನ್ನಡೆ ಸಿಗಲಿದೆ.  ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ವಾಹನ ಖರೀದಿಗೆ ಇದು ಸಕಾಲ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗುವುದು.
ಇದರಲ್ಲಿ ಇನ್ನಷ್ಟು ಓದಿ :