Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 21 ಫೆಬ್ರವರಿ 2020 (08:28 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಉದ್ಯೋಗ ಪ್ರಾಪ್ತಿಗಾಗಿ ಪ್ರಭಾವೀ ವ್ಯಕ್ತಿಗಳ ಸಹಾಯ ಪಡೆಯಲಿದ್ದೀರಿ. ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಕಂಡುಬರಲಿದೆ. ಹಾಗಿದ್ದರೂ ಒಂದಾದ ಮೇಲೊಂದರಂತೆ ಸಮಸ್ಯೆಗಳು ಬಂದು ಬೇಸರವಾಗಲಿದೆ. ಆತ್ಮಸ್ಥೈರ್ಯದಿಂದ ಎದುರಿಸಬೇಕಿದೆ.
 
ವೃಷಭ: ವಿದ್ಯಾರ್ಥಿಗಳು ಪೋಷಕರಿಗೆ ಖುಷಿಯಾಗುವಂತಹ ಸಾಧನೆ ಮಾಡಲಿದ್ದಾರೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗಬಹುದು. ಅಧಿಕ ಲಾಭ ತರುವ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಬೆಲೆ ಬಾಳುವ ವಸ್ತುಗಳನ್ನು ಜೋಪಾನ ಮಾಡಿಕೊಳ್ಳಿ.
 
ಮಿಥುನ: ನಿರುದ್ಯೋಗಿಗಳಿಗೆ ಉದ್ಯೋಗ ಸಂಬಂಧವಾಗಿ ಬಯಸಿದ ಉದ್ಯೋಗ ಸಿಗದೇ ನಿರಾಸೆಯಾಗಬಹುದು. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಲಿದ್ದೀರಿ. ಕಿರು ಸಂಚಾರದಿಂದ ಕಾರ್ಯಸಾಧನೆಯಾಗಲಿದೆ.
 
ಕರ್ಕಟಕ: ಸಂಗಾತಿಯ ಮನದಾಸೆ ಪೂರೈಸಲು ಖರ್ಚು ವೆಚ್ಚಗಳಾಗಲಿವೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಹಳೆಯ ಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗುವರು.
 
ಸಿಂಹ: ಉದ್ಯೋಗದಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಕಟಿಸಲು ಉತ್ತಮ ಅವಕಾಶಗಳು ಒದಗಿಬರಲಿವೆ. ಪಾಲಿಗೆ ಬಂದ ಅವಕಾಶವನ್ನು ಬಳಸಿಕೊಂಡಲ್ಲಿ ಉನ್ನತಿ ಪ್ರಾಪ್ತಿಯಾಗಲಿದೆ. ಹಿರಿಯರ ಮನಸ್ಸಿಗೆ ನೋವುಂಟು ಮಾಡಬೇಡಿ. ಅನಿರೀಕ್ಷಿತವಾಗಿ ಉಡುಗೊರೆ ಸಿಗಲಿದೆ.
 
ಕನ್ಯಾ: ಕುಟುಂಬ ಸದಸ್ಯರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡಲಿದ್ದು, ಕೆಲಸದಲ್ಲಿ ನಿರುತ್ಸಾಹ ಕಂಡುಬರುವುದು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟರೆ ಮಾತ್ರ ಯಶಸ್ಸು ಸಿಗುವುದು.
 
ತುಲಾ: ವೃತ್ತಿರಂಗದಲ್ಲಿ ನಿಮ್ಮ ವ್ಯವಹಾರ ಸುಧಾರಿಸಲು ಹಲವು ದಾರಿಗಳು ಕಂಡುಬರಲಿವೆ. ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡುವಿರಿ. ಕೋರ್ಟು ಕಚೇರಿ ವ್ಯವಹಾರದಲ್ಲಿ ಮುನ್ನಡೆಯಿರಲಿದೆ. ಮಕ್ಕಳಿಂದ ಸಂತಸ ಸಿಗಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.
 
ವೃಶ್ಚಿಕ: ಅತೀ ಹೆಚ್ಚು ಅಂಕ ಬಂದರೂ ಇನ್ನೂ ಸಾಲದು ಎಂಬ ಅತೃಪ್ತಿಯಿಂದ ಬಳಲುತ್ತೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಧನು: ದೈವಾನುಗ್ರಹದಿಂದ ಇಂದು ನೀವು ಕೈ ಹಾಕಿದ ಕೆಲಸಗಳೆಲ್ಲವೂ ಯಶಸ್ವಿಯಾಗಿ ಪೂರ್ತಿಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಯೋಗವಿದೆ. ಅನಿರೀಕ್ಷಿತವಾಗಿ ಕೆಲವೊಂದು ಖರ್ಚು ವೆಚ್ಚಗಳು ಎದುರಾಗಲಿವೆ. ಆದರೂ ಹಣಕಾಸಿನ ಹರಿವಿಗೆ ತೊಂದರೆಯಿರದು.
 
ಮಕರ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದೇಶ ಯಾನ ಮಾಡುವ ಯೋಗವಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ಆದರೆ ಇಂದು ಯಾರಿಗೂ ಸಾಲ ಕೊಡಲು ಹೋಗಬೇಡಿ, ಮರಳಿ ಬಾರದು. ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ.
 
ಕುಂಭ: ದೇಹಾರೋಗ್ಯದ ಚಿಂತೆ ಕಾಡುವುದು. ಸಂಗಾತಿಯ ಉಪೇಕ್ಷೆ ಮತ್ತಷ್ಟು ಚಿಂತೆ ಹೆಚ್ಚು ಮಾಡಲಿದೆ. ಆದರೆ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕಿದೆ. ವ್ಯವಹಾರದಲ್ಲಿ ಮುನ್ನಡೆ ಸಿಗಲಿದೆ. ಅನಿರೀಕ್ಷಿತವಾಗಿ ಮನೆಗೆ ಬಂಧು ಮಿತ್ರರ ಆಗಮನವಾಗಲಿದೆ.
 
ಮೀನ: ಇಷ್ಟ ಮಿತ್ರರ ಭೇಟಿ, ಭೋಜನ ಮನಸ್ಸಿಗೆ ಖುಷಿ ಕೊಡಲಿದೆ. ಕೆಳ ಹಂತದ ನೌಕರರಿಗೆ ಉದ್ಯೋಗದಲ್ಲಿ ಮುನ್ನಡೆ ಲಭ್ಯವಾಗಲಿದೆ. ಚಿನ್ನಾಭರಣ ಖರೀದಿಯಿಂದ ಲಾಭವಾಗಲಿದೆ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಡಿ.
ಇದರಲ್ಲಿ ಇನ್ನಷ್ಟು ಓದಿ :