ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವೃತ್ತಿರಂಗದಲ್ಲಿ ಇರುವ ಅಡೆತಡೆಗಳನ್ನು ನಿವಾರಿಸುವಿರಿ. ಮೇಲಧಿಕಾರಿಗಳ ಸಲಹೆ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು. ಆದರೆ ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ವಿನಾಕಾರಣ ಚಿಂತೆ ಬೇಡ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ದೂರ ಪ್ರಯಾಣಕ್ಕೆ ಇದ್ದಕ್ಕಿದ್ದಂತೆ ರದ್ದಾಗಲಿದೆ. ವಿದ್ಯಾರ್ಥಿಗಳಿಗೆ ಆಲಸ್ಯತನದಿಂದ ಅಭ್ಯಾಸದಲ್ಲಿ ಹಿನ್ನಡೆಯಾದೀತು. ನಿರೀಕ್ಷಿತ ಆದಾಯ ಬರದೇ ಹಣಕಾಸಿಗೆ ಪರದಾಡಬೇಕಾದೀತು.ಮಿಥುನ: ಅಧಿಕಾರಿ ವರ್ಗದವರಿಗೆ ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ಮಾನಸಿಕವಾಗಿ ಋಣಾತ್ಮಕ